Slide
Slide
Slide
previous arrow
next arrow

ಸ್ತ್ರೀ ವೇಷಧಾರಿಯ ಕೊರತೆ ನೀಗಿಸಿದವರು ಭಾಸ್ಕರ ಜೋಶಿ; ಉಮಾಕಾಂತ ಭಟ್ಟ ಮೆಚ್ಚುಗೆ

300x250 AD

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ರಂಗಭೂಮಿಯಲ್ಲಿ ಕೆರೆಮನೆ ಗಜಾನನ ಹೆಗಡೆಯವರ ನಂತರದಲ್ಲಿ ಸ್ತ್ರೀ ವೇಷಧಾರಿಯ ಕೊರತೆಯನ್ನು ನೀಗಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರಾದವರು ಭಾಸ್ಕರ ಜೋಶಿ ಶಿರಳಗಿ. ಅವರು ಎಂಬತ್ತರ ದಶಕದಲ್ಲಿ ಯಕ್ಷಗಾನದ ರಾಣಿ ಎಂದೇ ಪ್ರಸಿದ್ಧರಾದವರು ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರಕೈ ಹೇಳಿದರು.
ಅವರು ಕಲಗದ್ದೆ ನಾಟ್ಯವಿನಾಯಕ ದೇವಾಲಯದ ಪ್ರಾಂಗಣದಲ್ಲಿ ಸ್ಥಳೀಯ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಸಿದ್ಧ ಸ್ತ್ರೀ ವೇಷ ಕಲಾವಿದ ಭಾಸ್ಕರ ಜೋಶಿಯವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಅನಂತ ಹೆಗಡೆ ಕೊಳಗಿ ಯಕ್ಷಗಾನ ರಂಗಭೂಮಿಯಲ್ಲಿ ತಮ್ಮದೇ ಆದ ಪ್ರತಿಭೆ, ವಿದ್ವತ್, ಮಾತುಗಾರಿಕೆ ಮೂಲಕ ಪ್ರಸಿದ್ಧರಾದವರು. ಅವರು ಗುರುವಾಗಿ ಹಲವರನ್ನು ಬೆಳೆಸಿದ್ದು ಭಾಸ್ಕರ ಜೋಶಿ ಕೂಡ ಅವರ ಶಿಷ್ಯರಲ್ಲೊಬ್ಬರು. ಇಂಥ ಸಾಧಕ ಗುರುವಿನ ಹೆಸರಿನ ಪ್ರಶಸ್ತಿ ಜೋಶಿಯವರಿಗೆ ಸಲ್ಲುತ್ತಿದ್ದು ಇದು ಅವರ ಪಾಲಿಗೆ ರಾಷ್ಟ್ರಪ್ರಶಸ್ತಿಗೂ ಮಿಗಿಲಾದದ್ದು ಎಂದರು.
ಅಭಿನoದನಾ ಮಾತುಗಳನ್ನಾಡಿದ ಸೆಲ್ಕೋ ಇಂಡಿಯಾದ ಸಿ.ಇ.ಒ ಹಾಗೂ ಕಲಾವಿದ ಮೋಹನ ಹೆಗಡೆ ಹೆರವಟ್ಟಾ ಯಕ್ಷಗಾನ ಕ್ಷೇತ್ರವನ್ನು ಉಜ್ವಲಗೊಳಿಸಿದ ಕೆಲವೇ ಮಹನೀಯರಲ್ಲಿ ಭಾಸ್ಕರ ಜೋಶಿ ಓರ್ವರು. ಸ್ತ್ರೀ ವೇಷದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಸೈ ಅನಿಸಿಕೊಂಡ ಜೋಶಿ ಸುಧೀರ್ಘ ಕಾಲ ಯಕ್ಷಗಾನಕ್ಕಾಗಿ ದುಡಿದವರು. ಸ್ವಂತ ಮೇಳ ಕಟ್ಟಿ ಯಕ್ಷಗಾನ ರಂಗದಲ್ಲಿ ಮೊಟ್ಟಮೊದಲು ಪೂರ್ಣಚಂದ್ರ ರಂಗವನ್ನು ಅಳವಡಿಸಿದವರು. ಅವರ ಪಾತ್ರಗಳು ಇಂದಿಗೂ ಸ್ಮರಣೀಯವಾಗಿದೆ ಎಂದರು.
ಟಿ.ಎo.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮೂರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನಕ್ಷೇತ್ರದಲ್ಲಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾದ ಜೋಶಿಯವರಿಗೆ ಅನಂತಶ್ರೀ ಪ್ರಶಸ್ತಿ ನೀಡಿದ್ದು ಶಾಘ್ಲನೀಯ ಎಂದರು.
ಅತಿಥಿಗಳಾದ ವಿ.ದತ್ತಮೂರ್ತಿ ಭಟ್ ಶಿವಮೊಗ್ಗ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿದರು. ತುಳಸಿ ಹೆಗಡೆ ಬೆಟ್ಟಕೊಪ್ಪ ನಿರ್ವಹಿಸಿದರು. ಪತ್ರಕರ್ತ ನಾಗರಾಜ ಮತ್ತಿಗಾರ ವಂದಿಸಿದರು. ನಂತರ ಕಾರ್ತವಿರ್ಯಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.

300x250 AD
Share This
300x250 AD
300x250 AD
300x250 AD
Back to top