Slide
Slide
Slide
previous arrow
next arrow

ವಿಡಿಐಟಿ ಮುಡಿಗೆ ರಾಷ್ಟ್ರೀಯ ಪ್ರಶಸ್ತಿಗಳ ಗರಿ

300x250 AD

ಹಳಿಯಾಳ: ತಾಲೂಕಿನ ವಿಡಿಐಟಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಎಲ್ಲ ಆಯಾಮಗಳಲ್ಲಿನ ಚಟುವಟಿಕೆ ಗಮನಿಸಿ, ಇತ್ತೀಚಿಗೆ ನವದೆಹಲಿಯಲ್ಲಿ ಸನ್ಮಾನಿಸಲಾಯಿತು.
ವಿಡಿಐಟಿಯು 2004ರಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಾ ಮುಂಚೂಣಿಯಲ್ಲಿದೆ. ತಾಂತ್ರಿಕ, ಸಾಮಾಜಿಕ ಬದ್ಧತೆ, ಸಂಶೋಧನೆ, ಮುಂತಾದ ಕ್ಷೇತ್ರಗಳಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ.
ಎಜುಸ್ಕಿಲ್ ಕನೆಕ್ಟ್ ಸಂಸ್ಥೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸಹಯೋಗದಲ್ಲಿ 2022ರ ವಾರ್ಷಿಕ ಸಮಾವೇಶದಲ್ಲಿ ದಕ್ಷಿಣ ಭಾರತ ವಲಯದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಹಾವಿದ್ಯಾಲಯವೆಂದು ಕೆಎಲ್‌ಎಸ್‌ನ ವಿಡಿಐಟಿಯನ್ನು ಪುರಸ್ಕರಿಸಲಾಯಿತು.
ಸಮಾವೇಶದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ಅವರಿಗೆ ಶ್ರೇಷ್ಠ ಪ್ರಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಸಂಚಾಲಕ ಪ್ರೊ.ರಜತ್ ಆಚಾರ್ಯ ಅವರಿಗೆ ಶ್ರೇಷ್ಠ ಸಂಚಾಲಕ ಪ್ರಶಸ್ತಿ ನೀಡಲಾಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಪೂರ್ಣಿಮಾ ರಾಯ್ಕರ್ ಅವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು.
ಈ ಸಮಾರಂಭದಲ್ಲಿ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಮಂಡಳಿಯ ಅಧ್ಯಕ್ಷ ಪ್ರೊ.ಅನಿಲ್ ಸಹಸ್ರಬುದ್ಧೆ, ಎನ್‌ಬಿಎದ ಮಾಜಿ ಅಧ್ಯಕ್ಷ ಪ್ರೊ.ಕೆ.ಕೆ.ಅಗರ್ವಾಲ್, ಆಂಧ್ರಪ್ರದೇಶ ಸರ್ಕಾರದ ಶೈಕ್ಷಣಿಕ ಸಲಹೆಗಾರ ಆಲೂರ ಸಾಂಬಾಶಿವ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮಹಾವಿದ್ಯಾಲಯದ ಸಾಧನೆಯನ್ನು ಗುರುತಿಸಿ ರಾಷ್ಟç ಮಟ್ಟದ ಸಮಾವೇಶದಲ್ಲಿ ಪುರಸ್ಕರಿಸಿರುವುದು ಅತೀವ ಹೆಮ್ಮೆಯ ವಿಷಯ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕೂರ್ ತಿಳಿಸಿದ್ದಾರೆ.
ಎಲ್ಲ ಸಿಬ್ಬಂದಿಗಳ, ವಿದ್ಯಾರ್ಥಿ ಮತ್ತು ಪಾಲಕರ ಸಹಕಾರದಿಂದ ಮಹಾವಿದ್ಯಾಲಯಕ್ಕೆ ಈ ಪುರಸ್ಕಾರ ದೊರಕಿದೆ ಎಂದು ಪ್ರಾಚಾರ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಮಹಾವಿದ್ಯಾಲಯಕ್ಕೆ, ಪ್ರಾಚಾರ್ಯರಿಗೆ, ಪ್ರೊ.ರಜತ್ ಆಚಾರ್ಯ ಮತ್ತು ಪ್ರೊ.ಪೂರ್ಣಿಮಾ ರಾಯ್ಕರ್ ಅವರಿಗೆ ದೊರೆತ ಸನ್ಮಾನದ ಕುರಿತು ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top