Slide
Slide
Slide
previous arrow
next arrow

ಸುಶಾಸನ ದಿನ; 28 ಮಂದಿ ಬಿಜೆಪಿ ಸೇರ್ಪಡೆ

300x250 AD

ಕಾರವಾರ: ತಾಲ್ಲೂಕಿನ ಘಾಡಸಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳಗಾದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ‘ಸುಶಾಸನ ದಿನ’ (ಉತ್ತಮ ಆಡಳಿತ ದಿನ)ವನ್ನಾಗಿ ಆಚರಣೆ ಮಾಡಿ, ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು.
ವಾಜಪಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಾಸ್ತಾವಿಕ ಮಾತನಾಡಿದ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ವಾಜಪೇಯಿಯವರ ಸಾಧನೆಗಳು, ಸರಕಾರದ ಯೋಜನೆಗಳು, ಪಕ್ಷ ಸಂಘಟನೆಯಲ್ಲಿ ಪ್ರಸ್ತುತ ಶಾಸಕಿಯವರ ಕಾರ್ಯವನ್ನು ಸವಿಸ್ತಾರವಾಗಿ ವಿವರಿಸಿದರು.
ಗ್ರಾಮೀಣ ಪ್ರಭಾರಿ ಗಜಾನನ ಗುನಗಾರವರು ಚುನಾವಣೆ ದೃಷ್ಟಿಯಲ್ಲಿ ಪಕ್ಷದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದನ್ನ ನಾವು ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ 28 ಮಂದಿ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ, ಯೋಜನೆಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶ ಕೊಠಾರಕರ, ಉಪಾಧ್ಯಕ್ಷೆ ಗೀತಾ ಸಾತರಕರ, ದತ್ತಾರಾಮ ಬಾಂದೇಕರ, ಸುಜಾತಾ ಬಾಂದೇಕರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯ ನಾಯ್ಕ, ವಿಕೇಶ್ ಬಾಂದೇಕರ, ರಾಜೇಶ ಹೊಸಾಳಿಕರ, ಪದಾಧಿಕಾರಿಗಳಾದ ತೋಕು ಹರಿಕಂತ್ರ, ಕಲ್ಪನಾ ನಾಯ್ಕ, ವಿಭಾ ನಾಯ್ಕ, ಕಲ್ಪನಾ ಸಾಳಸ್ಕರ, ಹರಿಶ ನಾಗೇಕರ, ದೀಪಕ ದೇಸಾಯಿ, ಮುಕುಂದ ಗೌಡ, ಸತೀಶ ತಳೇಕರ, ಕಿರಣ ಕೋಠಾರಕರ, ಅನೀಲ ಮಾಜಾಳಿಕರ, ಶಕ್ತಿಕೇಂದ್ರದ ಪ್ರಮುಖರಾದ ಉಮೇಶ ಗೌಡ, ರಾಜೇಶ ನಾಯ್ಕ, ಸ್ವಾತಿ ದೇವಳಿ, ಜಿತೇಶ ಚೆಂಡಿಯಾ, ಬಾಬು ನಾಯ್ಕ,  ಸುವರ್ಣ ಗಾಂವಕರ, ಕುಮಾರ ನಾಯ್ಕ ಹಳಗಾ ಮುದಕಪ್ಪ ಓಲೆಕಾರ, ರವಿ ದುರ್ಗೆಕರ, ರಾಜೇಶ ಮಡಿವಾಳ, ಶ್ಯಾಮ ಪಾಗಿ, ಗ್ರಾಮ ಪಂಚಾಯತಿ ಸದಸ್ಯರಾದ ಕಿರಣ, ಶರದ, ಚೇತನ, ಸುಧಾ, ರಿತೀಕ್, ಸುನೀಲ್ ಸೇರಿದಂತೆ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top