• Slide
    Slide
    Slide
    previous arrow
    next arrow
  • ಬೀದಿಗಿಳಿದ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ: ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಕೆ

    300x250 AD

    ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆನ್ನುವ ಘಟ್ಟದ ಮೇಲಿನ ತಾಲೂಕಿನ ಜನರ ಕೂಗು ನಿರ್ಣಾಯಕ ಹೋರಾಟಕ್ಕಿಳಿದು ಪಕ್ಷಾತೀತವಾಗಿ ಜನಸಾಗರದಂತೆ ಹರಿದು ಬಂದು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
    ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ನಡೆಸಿದ ಅಭೂತಪೂರ್ವ ಪ್ರತಿಭಟನಾ ಮೆರವಣಿಗೆಗೆ ಸಾಥ್ ನೀಡಲು ಕಾಲೇಜು ವಿದ್ಯಾರ್ಥಿಗಳು ಸ್ವ ಹಿತಾಸಕ್ತಿಯಿಂದ ಮೆರವಣಗೆಯಲ್ಲಿ ಪಾಲ್ಗೊಂಡರೆ, ನೌಕರರು, ಆಟೊ ಯುನಿಯನ್, ಕಾರ್ಮಿಕ ಸಂಘಟನೆ, ಎಂಜಿನೀಯರಿಂಗ್ ಸಂಘಟನೆ, ಭೀಮ ಘರ್ಜನೆ ಸಂಘಟನೆ, ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ಸೇರಿದಂತೆ ಘಟ್ಟದ ಮೇಲಿನ ಬಾಗಶಃ ಸಂಘಟನೆಗಳ ಜನರು ತಮ್ಮ ಕೆಲಸವನ್ನು ಬಿಟ್ಟು ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
    ಹಳೆಬಸ್ ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿದ್ದ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಡಿಸಿಸಿ ಅದ್ಯಕ್ಷ ಭೀಮಣ್ಣ ನಾಯ್ಕರು ಘಟ್ಟದ ಮೇಲಿನ ತಾಲೂಕಿನ ಜನರ ಅಭಿವೃದ್ಧಿ ದೃಷ್ಟಿಯಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆನ್ನುವುದು ಪಕ್ಷಾತೀತವಾದ ಬೇಡಿಕೆ. ಈ ಬೇಡಿಕೆಯನ್ನು ಉನ್ನತ ಸ್ಥಾನದಲ್ಲಿರುವ ಸ್ಪೀಕರ್ ಕಾಗೇರಿಯವರು ಈಡೇರಿಸುತ್ತಾರೆನ್ನುವುದು ನಮಗೆ ವಿಶ್ವಾಸವಿದೆ. ಶಿರಸಿ ಜಿಲ್ಲೆಯಾಗುವದಕ್ಕೆ ಕಾಗೇರಿಯವರಿಗೆ ನಮ್ಮೆಲ್ಲರ ಬೆಂಬಲವಿದೆ ಎಂದರು.
    ಶಿರಸಿ ಜಿಲ್ಲೆಯಾಗುವದಕ್ಕೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಹೊಂದಿದೆ. ಕೇವಲ ಘೋಷಣೆ ಮಾಡಿದರೆ ಸಾಕು, ಉಳಿದ ಕೆಲಸ ಸುಲಭವಾಗಿವಾಗುತ್ತದೆ. ಈ ಹೋರಾಟಕ್ಕೆ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಸೇರಿದಂತೆ ಸಮಿತಿ ಸದಸ್ಯರ ಬಹುದೊಡ್ಡ ಕೊಡುಗೆಯಿದೆ. ಅವರ ಹೋರಾಟದ ಫಲ ಮತ್ತು ಕಾಗೇರಿಯವರ ಮೇಲಿನ ನಂಬಿಕೆ ಶಿರಸಿ ಜಿಲ್ಲೆ ಘೋಷಣೆಗೆ ನಾವು ಕಾತರರಾಗಿದ್ದೇವೆ ಎಂದರು.
    ಬಿಜೆಪಿ ವಕ್ತಾರ ಸದಾನಂದ ಭಟ್ಟ್ ಮಾತನಾಡಿ, ನಾವು ಭೌಗೋಳಿಕವಾಗಿ ಅನೇಕಾರು ಸಮಸ್ಯಗಳನ್ನು ಎದುರಿಸುತ್ತಿದ್ದೇವೆ. ನಾವು ಜಿಲ್ಲೆಯನ್ನು ವಿಭಾಗ ಮಾಡಿ ಎಂದು ಕೇಳುತ್ತಿಲ್ಲ. ಆಡಳಿತಾತ್ಮಕವಾಗಿ ಶಿರಸಿ ಪ್ರತ್ಯೇಕ ಜಿಲ್ಲೆ ಎಂದು ಘೋಷಣೆ ಮಾಡಬೇಕು. ನಮ್ಮ ಹೋರಾಟ ಪಕ್ಷಾತೀತವಾಗಿರುವುದರಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
    ಹಳೆ ಬಸ್ ನಿಲ್ದಾಣದಿಂದ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಇವರಿಂದ ಚಾಲನೆ ಪಡೆದುಕೊಂಡ ಮೆರವಣಿಗೆಯು ಶಿವಾಜಿ ಚೌಕ, ಸಿಪಿ ಭಝಾರ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿತು. ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ತಹಶಿಲ್ದಾರ ಶ್ರೀಧರ ಮುಂದಲಮನಿ ಮನವಿ ಸ್ವೀಕರಿಸಿದರು.
    ಈ ಹೋರಾಟದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾದ್ಯಕ್ಷೆ ವೀಣಾ ಶೆಟ್ಟಿ, ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮತಿಯ ಪ್ರಮುಖರಾದ ಎಂ.ಎಂ.ಭಟ್, ಪರಮಾನಂದ ಹೆಗಡೆ, ಮಂಜು ಮೊಗೆರ್, ಅಶೋಕ ಭಟ್, ನಂದಕುಮಾರ ಜೋಗಳೆಕರ್, ಬಸವರಾಜ ಒಸಿಮಠ, ಸಿ.ಎಸ್.ಭಟ್, ಶ್ಯಾಮಸುಂದರ ಭಟ್, ಸತೀಶ ಭಟ್, ರಘು ಕಾನಡೆ ಮುಂತಾದವರು ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top