ಶಿರಸಿ: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ಶ್ರೀ ಕ್ಷೇತ್ರ ಸೋಮಸಾಗರದ ಸೋಮೇಶ್ವರ ಸಭಾಭವನದಲ್ಲಿ ದಿ.ನಾಗಪತಿ ಭಟ್ ದ್ವಿತೀಯ ಸಂಸ್ಮರಣೆ ಅಂಗವಾಗಿ ಸೋಮಸಾಗರದ ಶ್ರೀ ವ್ಯಾಸನ್ಯಾಸ ವತಿಯಿಂದ ಏರ್ಪಡಿಸಲಾಗಿದ್ದ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ಯಶಸ್ವಿಯಾಗಿ ನಡೆಯಿತು.
ಕವಿ ಮಂಜುನಾಥ ಭಾಗ್ವತ್ ಹೊಸ್ತೋಟ ವಿರಚಿತ ಯಕ್ಷಗಾನದಲ್ಲಿ ದೂರ್ವಾಸನಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ ಕೆರೆಕೈ, ಕಾಲಪುರುಷನಾಗಿ ನೀಲ್ಕೋಡು ಶಂಕರ್ ಹೆಗಡೆ, ರಾಮನಾಗಿ ಕೆ.ಜಿ.ಮಂಜುನಾಥ್, ಲಕ್ಷ್ಮಣನಾಗಿ ಶಿರಳಗಿ ತಿಮ್ಮಪ್ಪ ಹೆಗಡೆ,ಮತ್ತು ದೇವೇಂದ್ರನಾಗಿ ಅಶೋಕ ಭಟ್ ಸಿದ್ದಾಪುರ ಕಾಣಿಸಿಕೊಂಡು, ಆಯಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.
ಹಿಮ್ಮೇಳದ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಎ.ಪಿ.ಪಾಠಕ್, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಪಾಲ್ಗೊಂಡರು.
ದಿ.ನಾಗಪತಿ ಭಟ್’ರವರ ಭಾವಚಿತ್ರದ ಎದುರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘಟಕರಾದ ದತ್ತು ಭಟ್ ಸೋಮಸಾಗರ,ಮಹೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.