ಶಿರಸಿ: ಶ್ರೀ ಅಯ್ಯಪ್ಪ ಸ್ವಾಮಿ ಮಂಡಳ ಉತ್ಸವದ ಅನ್ನದಾನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಡಿಸೆಂಬರ್ 26, ಸೋಮವಾರದಂದು ಮುಂಜಾನೆ 11 ಘಂಟೆಗೆ ನಗರದ ಹುಬ್ಬಳ್ಳಿ ರಸ್ತೆಯ ಅಯ್ಯಪ್ಪ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಣಹೋಮ, ಹಣ್ಣು ಕಾಯಿ ಸಮರ್ಪಣೆ ನಡೆಯಲಿದ್ದು ಹಾಗೆಯೇ ಸಾರ್ವಜನಿಕ ಅನ್ನಸಂತರ್ಪಣೆ ಕಾರ‍್ಯಕ್ರಮವಿರುತ್ತದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ಟಿ. ನಾಯ್ಕ ವಹಿಸಲಿದ್ದು, ಅನ್ನದಾನ ಕಾರ್ಯಕ್ರಮದ ಉದ್ಘಾಟಕರಾಗಿ ಸೂರಜ ಎಂ. ಗಂಗೋಳ್ಳಿ ಆಗಮಿಸಲಿದ್ದಾರೆ. ಮಹಾಂತೇಶ ಪೂಜಾರಿ ಧಾರವಾಡ ಇವರು ಸಿಹಿ ವಿತರಿಸಲಿದ್ದಾರೆ. ಕಿರಣ ಚಿತ್ರಕಾರರವರು ಶಿರಸಿಯ ಯಾವತ್ತೂ ಗುರು ಸ್ವಾಮಿಗಳಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
ಡಿ. 27, ಮಂಗಳವಾರದಂದು ಸಾಯಂಕಾಲ 5-30 ಘಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ದೀಪೋತ್ಸವ ನಡೆಯಲಿದೆ. ದೀಪೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಬಾರ್‌ಬೆಂಡರ್ ಅಸೋಸಿಯೇಶನ್ ಅಧ್ಯಕ್ಷ ವೆಂಕಟೇಶ ನಾಯ್ಕ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗುರುಸ್ವಾಮಿಯರಾದ ಎ.ಆರ್. ನಾಯರ್, ಸಂದೀಪ ಎಂ. ಸಿರಸಿಕರ್ ಉಪಸ್ಥಿತರಿರಲಿದ್ದಾರೆ. ಅಯ್ಯಪ್ಪ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷ ಅರುಣ ಕೆ. ಪ್ರಭು, ಉಪಾಧ್ಯಕ್ಷ ರವಿ ಚಂದಾವರ, ಭೀಮಣ್ಣ ಟಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಬಾರಕೂರ ಹಾಗೂ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ.