Slide
Slide
Slide
previous arrow
next arrow

ಕಲೋತ್ಸವ: ಮಾರಿಕಾಂಬಾದ ಅಜಯ್ ಹೆಗಡೆ  ರಾಷ್ಟ್ರ ಮಟ್ಟಕ್ಕೆ ಆಯ್ಕೆ

300x250 AD

ಶಿರಸಿ:  ಕಳೆದ ನವೆಂಬರನಲ್ಲಿ ನಡೆದ ಕಲೋತ್ಸವ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅಜಯ್ ರಮೇಶ್ ಹೆಗಡೆ   ಬಾಲಕರ ಜಾನಪದ ನೃತ್ಯ ವಿಭಾಗದಲ್ಲಿ ರಾಷ್ಟ್ರ‌ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ಜಾನಪದ‌ ನೃತ್ಯದಲ್ಲಿ ಯಕ್ಷಗಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಮುಂಬರುವ ಜನವರಿಯಲ್ಲಿ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ.
 ಈತ ಹಿರಿಯ ಕಲಾವಿದ  ಜಿ.ಎನ್. ಹೆಗಡೆ ಹಾವಳಿಮನೆ ಇವರ ಮೊಮ್ಮಗ.
ಅದೇ ರೀತಿ ಮಾರಿಕಾಂಬಾ ಪ್ರೌಢಶಾಲೆಯ ಸುಶ್ಮಿತಾ ದೊಂಬೆ 9ನೇ ತರಗತಿ ಬಾಲಕಿಯರ 3D ಆರ್ಟ್  ವಿಭಾಗದಲ್ಲಿ ಜಿಲ್ಲೆಗೆ  ಪ್ರಥಮ ಸ್ಥಾನ, ಪ್ರಿಯಾ ಪಿ ಭಟ್ 9ನೇ ತರಗತಿ ಬಾಲಕಿಯರ ಜಾನಪದ ನೃತ್ಯ – ಯಕ್ಷಗಾನದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ, ಶ್ರೀನಿಧಿ ಎಲ್. ಹೆಗಡೆ 9ನೇ ತರಗತಿ ಬಾಲಕಿಯರ ನಾಟಕದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ವರ್ಷಿಣಿ ಗುಡಿಗಾರ್ 10ನೇ ತರಗತಿ ಬಾಲಕಿಯರ ಚಿತ್ರಕಲೆಯಲ್ಲಿ ಜಿಲ್ಲೆಗೆ ದ್ವಿತೀಯ, ಸ್ಪಂದನ ರವೀಂದ್ರ ಭಟ್ 9ನೇ ತರಗತಿ ಬಾಲಕಿಯರ ಶಾಸ್ತ್ರೀಯ ಗಾಯನದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ,  ಸೂರಜ್ ಎಸ್. ಮಳಗಿಕರ್ 10 ನೇ ತರಗತಿ ಬಾಲಕರ ಶಾಸ್ತ್ರೀಯ ವಾದನ ತಬಲಾದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಮಾರ್ಗದರ್ಶನ ನೀಡಿ ಸಹಕರಿಸಿದ ಶಿಕ್ಷಕ ಧರ್ಮಾನಂದ ಭಟ್ಟ ಅವರನ್ನು ಮತ್ತು ವಿಜೇತ ವಿದ್ಯಾರ್ಥಿಗಳನ್ನು ಪ್ರೌಢಶಾಲೆಯ ಉಪಪ್ರಾಂಶುಪಾಲ ರಾಜೇಶ್ ವಿ.ನಾಯ್ಕ, ಶಿಕ್ಷಕ ವೃಂದ , ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು  ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top