Slide
Slide
Slide
previous arrow
next arrow

ವಜ್ರಳ್ಳಿ ಬಳಿ ಹೊತ್ತುರಿದ ರಾಸಾಯನಿಕ ತುಂಬಿದ ಲಾರಿ: ಸುಟ್ಟುಕರಕಲಾದ ಸರಕುಗಳು

300x250 AD

ಅಂಕೋಲಾ: ರಾಸಾಯನಿಕ ವಸ್ತು ಹಾಗೂ ಇತರ ಸರಕುಗಳನ್ನು ಸಾಗಿಸುತ್ತಿದ್ದ ಭಾರಿ ಗಾತ್ರದ ಲಾರಿಯೊಂದು ರಾ.ಹೆ. 63ರ ಯಲ್ಲಾಪುರ – ಅಂಕೋಲಾ ಮಾರ್ಗ ಮಧ್ಯೆ ವಜ್ರಳ್ಳಿ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಸಂಭವಿಸಿದೆ. 
ಮುಂಬೈಯಿಂದ ಕೇರಳ ಕಡೆ ರಾಸಾಯನಿಕ ಪದಾರ್ಥಗಳು, ಡ್ರೈ ಫ್ರುಟ್ಸ್, ಮತ್ತಿತರ ಸರಕು ಸಾಮಾಗ್ರಿಗಳನ್ನು  ಸಾಗಿಸಲಾಗುತ್ತಿದ್ದ ಸಂದರ್ಭದಲ್ಲಿ , ದಾರಿ ಮಧ್ಯೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ಲಾರಿಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಯಲ್ಲಾಪುರ ಹಾಗೂ ಅಂಕೋಲಾ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸುವ ಕಾರ್ಯ ಕೈಗೊಂಡಿದ್ದು, ಈ ಅವಘಡದಿಂದ ಬೆಂಕಿಯ ಕೆನ್ನಾಲಿಗೆಗೆ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. ದಟ್ಟ ಹೊಗೆ ಆವರಿಸಿದ‌ ಕಾರಣ‌ ಹೆದ್ದಾರಿಯಲ್ಲಿ  ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿದ್ದು,‌ ಅದೃಷ್ಟವಶಾತ್ ಲಾರಿಯ ಚಾಲಕ ಸೇರಿದಂತೆ ಯಾವುದೇ‌ ಪ್ರಾಣಾಪಾಯವಾಗಲಿಲ್ಲ
ಹೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಅಂಕೋಲಾ ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳು, ಸುಂಕಸಾಳ  ಪಿ ಸಿಬ್ಬಂದಿಗಳಾದ ಸುಬ್ರಾಯ ಭಟ್ಟ, ಶೇಖರ ಸಿದ್ದಿ ಸ್ಥಳದಲ್ಲಿ ಹಾಜರಿದ್ದು,ಹೆದ್ದಾರಿ ಸಂಚಾರ ವ್ಯತ್ಯಯ ಸರಿಪಡಿಸಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟು ಹೆದ್ದಾರಿ ಇತರೆ ಪ್ರಯಾಣಿಕರ ಆತಂಕ ದೂರ ಮಾಡಿದರು.

300x250 AD
Share This
300x250 AD
300x250 AD
300x250 AD
Back to top