Slide
Slide
Slide
previous arrow
next arrow

ಚಿಣ್ಣರ ವನದರ್ಶನದಲ್ಲಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು

300x250 AD

ಕಾರವಾರ: ಅರಣ್ಯ ವಿಭಾಗದಿಂದ ಕದ್ರಾ ಅರಣ್ಯ ವಲಯದ ಆದರ್ಶ ವಿದ್ಯಾಲಯ, ಮಲ್ಲಾಪುರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಕೃತಿಯಲ್ಲಿ ಮನುಷ್ಯನ ಅನಗತ್ಯ ಹಸ್ತಕ್ಷೇಪದಿಂದ ಇಂದು ಪರಿಸರ ನಾಶವಾಗಿದೆ. ನಮ್ಮ ಕಲ್ಪನೆಗೂ ಮೀರಿ ಎಷ್ಟೋ ಜೀವಿಗಳು ವಿನಾಶ ಹೊಂದಿವೆ. ಪರಿಸರ, ವನ್ಯಜೀವಿಗಳ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿ ಜೀವನದಿಂದಲೇ ಅರಿತುಕೊಳ್ಳಲು ಇಂದು ಅರಣ್ಯ ಇಲಾಖೆಯಿಂದ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕದ್ರಾ ವಲಯ ಅರಣ್ಯ ಅಧಿಕಾರಿ ಲೋಕೇಶ ಪಾಠಣಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಣಶಿ ಪ್ರಕೃತಿ ಶಿಬಿರದಲ್ಲಿ ಪರಶುರಾಮ ಭಜಂತ್ರಿ, ಅರಣ್ಯ ರಕ್ಷಕ, ಅಣಶಿ ಇವರು ವಿದ್ಯಾರ್ಥಿಗಳಿಗೆ ಪ್ರಮುಖ ಬಿಗ್-4 ಹಾವುಗಳು, ವಿಷಕಾರಿ, ವಿಷರಹಿತ ಹಾವುಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಉಪನ್ಯಾಸ ನೀಡಿದರು. ಉಪವಲಯ ಅರಣ್ಯಾಧಿಕಾರಿ ಶ್ರೀಧರ ಪರಿಸರದಲ್ಲಿ ಚಿಟ್ಟೆಗಳ ಪಾತ್ರ, ಚಿಟ್ಟೆಯ ಜೀವನ ಚಕ್ರ, ಚಿಟ್ಟೆಗಳನ್ನು ಗುರುತಿಸುವುದು, ಚಿಟ್ಟೆಗಳ ವಿಧಗಳ ಬಗ್ಗೆ ಮಾಹಿತಿ ನೀಡಿದರು.
ಉರಗ ಪ್ರೇಮಿ ಬಿಲಾಲ್ ಶೇಖ್ ಕಾಡಿನಲ್ಲಿ ದೊರೆಯುವ 30ಕ್ಕೂ ಹೆಚ್ಚು ಕಾಡುಹಣ್ಣುಗಳ ಬಗ್ಗೆ ವಿವರಿಸುತ್ತಾ, ಕಾಡುಹಣ್ಣು ಕಾಯಿಗಳನ್ನು ಔಷಧಿ, ಸಾಂಬಾರ ಪದಾರ್ಥಗಳಲ್ಲಿ ಬಳಸುವ ಬಗ್ಗೆ ಹಾಗೂ ಮನುಷ್ಯನ ಅತಿಯಾದ ಬಳಕೆಯಿಂದ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ ಎಂದು ಕಾಡುಹಣ್ಣುಗಳ ಕುರಿತು ಮಾಹಿತಿ ನೀಡಿದರು.
ವಿರ್ಜೆ ಸಸ್ಯಪಾಲನಾ ಕ್ಷೇತ್ರದಲ್ಲಿ ವಲಯ ಅರಣ್ಯಾಧಿಕಾರಿ ಲೋಕೇಶ ಬೀಜೋಪಚಾರ, ಸಸಿಗಳ ಪಾಲನೆ-ಪೋಷಣೆ, ನೆಡುತೋಪು ಬೆಳೆಸುವಿಕೆಯ ಕುರಿತು ಮಾಹಿತಿ ನೀಡಿದರು. ಗೋಟೆಗಾಳಿ ಚಿಟ್ಟೆ ಉದ್ಯಾನವನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಿಕಂದರ್ ಜಮಾದಾರ, ಅರಣ್ಯ ರಕ್ಷಕ ರಮೇಶ ಹಡಪದ ಇವರು ಚಿಟ್ಟೆ ಉದ್ಯಾನವನದ ಕುರಿತು ಮಾಹಿತಿ ನೀಡಿದರು. ತದನಂತರ ವಿದ್ಯಾರ್ಥಿಗಳಿಗೆ ಕಾರವಾರದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ವಿವಿಧ ಜಲಚರ, ಪಕ್ಷಿ, ವೃಕ್ಷಗಳ ಕುರಿತು ಸುಗಮಗಾರ ವಿರೇಂದ್ರ ಪವಾರ ಮಾಹಿತಿ ನೀಡಿದರು. ನಂತರ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದಲ್ಲಿ ಹಲವು ಮಾಹಿತಿಗಳನ್ನು ನೀಡಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಉಪವಲಯ ಅರಣ್ಯಾಧಿಕಾರಿ ಆನಂದ ಸ್ವಾಗತಿಸಿದರು. ಅರಣ್ಯ ರಕ್ಷಕ ನಾಗರಾಜ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು, ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top