• Slide
    Slide
    Slide
    previous arrow
    next arrow
  • ಮ್ಯಾಟ್ ಕಬಡ್ಡಿ ಪಂದ್ಯಾವಳಿ; ಶ್ರೀದೇವಿ ಬಾಯ್ಸ್ ಪ್ರಥಮ

    300x250 AD

    ಹೊನ್ನಾವರ: ತಾಲೂಕಿನ ಜನ್ನಕಡ್ಕಲನಲ್ಲಿ ಶ್ರೀದೇವಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಹಿಂದೂ ಕುಂಬ್ರಿ ಮರಾಠ ಸಮಾಜದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಜರುಗಿತು.

    ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು. ಕ್ರೀಡಾಂಗಣವನ್ನು ತೇಜಸ್ವಿನಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಯ್ಯಪ್ಪ ನಾಯ್ಕ ಉದ್ಘಾಟಿಸಿದರು. ಅಮೆಚ್ಯೂರ್ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಜಿ.ಜಿ.ಶಂಕರ್ ಟ್ರೋಫಿ ಅನಾವರಣಗೊಳಿಸಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ್ ಸೋನಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

    300x250 AD

    ಚಿಕ್ಕನಕೋಡ್ ಗ್ರಾ.ಪಂ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀದೇವಿ ಬಾಯ್ಸ್ ಜನ್ನಕಡ್ಕಲ್ ತಂಡ ಪ್ರಥಮ, ಯು.ಎನ್.ಬಿ ಬಾಯ್ಸ್ ಕುಮಟಾ ತಂಡ ದ್ವಿತೀಯ, ಬೈಂದೂರು ತಂಡ ತೃತೀಯ ಹಾಗೂ ಶಿರಸಿ ತಂಡ ನಾಲ್ಕನೇ ಸ್ಥಾನಗಳಿಸಿತು. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top