• Slide
    Slide
    Slide
    previous arrow
    next arrow
  • ಕಾರ್ಯಕರ್ತರಿಂದ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ಕುಮಾರಸ್ವಾಮಿ ಜನ್ಮದಿನಾಚರಣೆ

    300x250 AD

    ಕುಮಟಾ: ತಾಲೂಕಿನ ಅಳ್ವೆಕೋಡಿಯ ವಿಶೇಷಚೇತನ ಮಕ್ಕಳ ದಯಾನಿಲಯ ಶಾಲೆಯಲ್ಲಿ ಕೇಕ್ ಕತ್ತರಿಸಿ, ಮಕ್ಕಳೊಂದಿಗೆ ಸಿಹಿ ಊಟ ಸವಿಯುವ ಮೂಲಕ ಜೆಡಿಎಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
    ಬಡವರ ಬಂಧು, ರೈತರ, ಕೂಲಿ ಕಾರ್ಮಿಕರ ಕಣ್ಮಣಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಹುಟ್ಟು ಹಬ್ಬದ ನಿಮಿತ್ತ ತಾಲೂಕು ಜೆಡಿಎಸ್ ಘಟಕದ ಕಾರ್ಯಕರ್ತರು ಅಳ್ವೆಕೋಡಿಯ ವಿಶೇಷಚೇತನ ಮಕ್ಕಳ ದಯಾನಿಲಯ ಶಾಲೆಗೆ ತೆರಳಿ, ಕೇಕ್ ಕತ್ತರಿಸುವ ಮೂಲಕ ಮಕ್ಕಳೊಂದಿಗೆ ಕುಮಾರಸ್ವಾಮಿಯವರ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ಮಕ್ಕಳ ಜೊತೆಗೂಡಿ ಕೇಕ್ ಕತ್ತರಿ, ಕುಮಾರಸ್ವಾಮಿಯವರ ಜನಪರ ವ್ಯಕ್ತಿತ್ವದ ಬಗ್ಗೆ ಕೊಂಡಾಡಿದರು. ಕುಮಾರಸ್ವಾಮಿಯವರು ಸಮರ್ಥ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇವತ್ತಿಗೆ ಜಾರಿಯಲ್ಲಿರುವ ಅನೇಕ ಜನಪರ ಯೋಜನೆಗಳು ಅವರ ಕೊಡುಗೆಯಾಗಿದೆ. ಅವರ ಕ್ರಾಂತಿಕಾರಿ ನಡೆ, ಬಡ, ಮಧ್ಯಮ ವರ್ಗಗಳಿಗೆ ಆಸರೆಯಾಗಿದೆ ಎಂದರು.
    ಬಳಿಕ ತಾಲೂಕು ಸರ್ಕಾರಿ ಆಸ್ಪತ್ರೆಗೆ ತೆರಳಿದ ಜೆಡಿಎಸ್ ಕಾರ್ಯಕರ್ತರು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಕುಮಾರಸ್ವಾಮಿಯವರ ಹುಟ್ಟು ಹಬ್ಬದ ಸಂಭ್ರಮವನ್ನು ರೋಗಿಗಳ ಬಳಿ ಹಂಚಿಕೊoಡ ಕಾರ್ಯಕರ್ತರು, ನೀವೆಲ್ಲ ಶೀಘ್ರದಲ್ಲಿ ಗುಣಮುಖರಾಗಿ ಮನೆಗೆ ತೆರಳಿ ಎಂದು ರೋಗಿಗಳಿಗೆ ಶುಭ ಹಾರೈಸಿದರು.
    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಜಿ ಕೆ ಪಟಗಾರ, ಹಿಂದುಳಿದ ವರ್ಗಗಳ ಅಧ್ಯಕ್ಷ ಸತೀಶ ಮಹಾಲೆ, ಕಾರ್ಯಾಧ್ಯಕ್ಷ ಬಲೀಂದ್ರ ಗೌಡ, ಪ್ರಮುಖರಾದ ರೆಹಮತಲ್ಲಾ, ಅಕ್ರಮ ಶೇಖ್, ವಸಂತ ಗೌಡ, ಚಿನ್ನು ಅಂಬಿಗ, ಬೀರಾ ಗೌಡ, ದತ್ತು ಪಟಗಾರ, ಪಾಂಡು ಪಟಗಾರ, ಎಂ ಟಿ ನಾಯ್ಕ, ಗೋವಿಂದ ಗೌಡ, ಪಕ್ಷದ ಕಾರ್ಯಕರ್ತರು, ಸೂರಜ ಸೋನಿ ಗೆಳೆಯರ ಬಳಗದ ಅಣ್ಣಪ್ಪ ನಾಯ್ಕ, ವಿನಾಯಕ ನಾಯ್ಕ, ಸುದರ್ಶನ ಶಾನಭಾಗ, ಮಂಜು ನಾಯ್ಕ, ಮಂಜುನಾಥ ಚಂದಾವರ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top