Slide
Slide
Slide
previous arrow
next arrow

ಶಾಸಕ ದಿನಕರ ಶೆಟ್ಟಿಯಿಂದ ಬಿಜೆಪಿ ಕಾರ್ಯಕರ್ತರ ದುರ್ಬಳಕೆ: ರವಿಕುಮಾರ ಆರೋಪ

300x250 AD

ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕೆ.ವಿ.ಶೆಟ್ಟಿ ಆ್ಯಂಡ್ ಕಂಪೆನಿಯಲ್ಲಿ ಪಾಲುದಾರಿಕೆ ಹೊಂದಿಲ್ಲ. ವ್ಯವಹಾರಿಕ ಸಂಬoಧವೂ ಹೊಂದಿಲ್ಲ ಎಂಬ ಕನಿಷ್ಟ ಜ್ಞಾನವೂ ಇಲ್ಲದ ಶಾಸಕ ದಿನಕರ ಶೆಟ್ಟಿ ಅವರು ತಮ್ಮ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು ನನ್ನ ತಾಯಿ ಶಾರದಾ ಶೆಟ್ಟಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಕಿಡಿಕಾರಿದ್ದಾರೆ.
ಪಟ್ಟಣದ ನಗರೊತ್ಥಾನ ಕಾಮಗಾರಿಗೆ ಕೆ.ವಿ,ಶೆಟ್ಟ ಆ್ಯಂಡ್ ಕಂಪೆನಿ ಕೋರ್ಟ್ ಸ್ಟೇ ತಂದಿದ್ದಾರೆoದು ಬಿಜೆಪಿಯ ನಾಯಕರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಮ್ಮ ಕಂಪೆನಿ ನಿಮ್ಮ ಅವಧಿಯಲ್ಲಿ ಕೇವಲ 3.5 ಕೋಟಿ ಅನುದಾನದ ಕಾಮಗಾರಿಯನ್ನು ಮಾಡಿದೆ. ಬೇರೆಲ್ಲಾ ಕೆಲಸವನ್ನು ನಿಮ್ಮ ಪಕ್ಷದವರೇ ಮಾಡಿದ್ದಾರೆ. ಹಾಗಾದರೆ ಬಿಜೆಪಿಯವರು ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎನ್ನುವ ಆದೇಶ ಇದೇಯಾ? ಬಂದಿದ್ದರೆ ದಯವಿಟ್ಟು ಜನರಿಗೆ ತಿಳಿಸಿ. ಯಾರಾದರೂ ಕೋರ್ಟಿಗೆ ಹೋಗಿದ್ದಾರೆ ಎಂದರೆ ಅವರಿಗೆ ಅನ್ಯಾಯವಾಗಿದೆ ಎಂದು ಅರ್ಥ. ಅದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವವುದಕ್ಕೂ ಬಿಜೆಪಿಯವರ ಅಪ್ಪಣೆ ಬೇಕೆ ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಕೆಲಸಕ್ಕೆ ನಾವು ತೊಂದರೆ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಿರಿ. ಈ ಮಾತನ್ನು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಅಂದು ನನ್ನ ತಾಯಿ ಶಾರದಾ ಶೆಟ್ಟಿ ತಂದ ಯು.ಜಿ.ಡಿ, ಗ್ರಾಮ ವಿಕಾಸ, ನಗರೋತ್ಥಾನ ಮುಂತಾದ ಅನೇಕ ಕಾಮಗಾರಿಗಳನ್ನು ಆರಂಭಿಸಿದಾಗ ದಿನಂಪ್ರತಿ ಬಂದು ಕಾಮಗಾರಿಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಆಗ ಕುಮಟಾದ ಅಭಿವೃದ್ಧಿ ಕುರಿತು ಯೋಚಿಸಿಲ್ಲವೇಕೆ. ಗುತ್ತಿಗೆದಾರರ ಬಗ್ಗೆ ಇಷ್ಟೆಲ್ಲಾ ಬ್ಯಾಟ್ ಬೀಸುತ್ತಿರುವುದನ್ನು ನೋಡಿದರೇ ಕುಮಟಾ ಪಟ್ಟಣದ ಅಭಿವೃದ್ಧಿಯ ಬಗ್ಗೆ ಚಿಂತೆಯೋ ಅಥವಾ 40 ಫರ್ಸಂಟೇಜ್ ಕಮಿಷನ್ ಬಗ್ಗೆ ಚಿಂತೆಯೋ? ಎಂದು ಪ್ರಶ್ನಿಸಿದ್ದಾರೆ.
ದಿ.ಸದಾನಂದ ನಾಯ್ಕ ಪುರಸಭಾ ಅಧ್ಯಕ್ಷರಾಗಿದ್ದಾಗ ಹಾಗೂ ದಿನಕರ ಕೆ ಶೆಟ್ಟಿಯವರು ಜೆ.ಡಿ.ಎಸ್ ಶಾಸಕರಾಗಿದ್ದಾಗ ನಮ್ಮ ಕೆ.ವಿ.ಶೆಟ್ಟಿ ಆ್ಯಂಡ್ ಕಂಪೆನಿಯವರು ಇದೇ ರೀತಿ ಕೋರ್ಟಿಗೆ ಹೋಗಿ ಅಲ್ಲಿ ಜಯಗಳಿಸಿ ಕಾಮಗಾರಿ ಮಾಡಿರುತ್ತಾರೆ. ಹಾಗಾಗಿಯೇ ಕೆ.ವಿ.ಶೆಟ್ಟಿ ಕಂಪನಿಯವರಿಗೆ ಕಾಮಗಾರಿ ಸಿಕ್ಕರೆ ತಮಗೆ ಬರಬೇಕಾದ ಪರ್ಸಂಟೇಜ್ ಬರದೇ ಇರುವ ಬಗ್ಗೆ ಹೆದರಿ ಶಾಸಕರು ಹಾಗೂ ಬಿಜೆಪಿ ಮುಖಂಡರು ಈ ರೀತಿ ಅಪಪ್ರಚಾರ ಮಾಡತ್ತಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಇಲ್ಲಿ ಸ್ವಂತ ಅಭಿವೃದ್ಧಿಯ ಬಗ್ಗೆಯೇ ಹೆಚ್ಚಿನ ಆಸಕ್ತಿ ಎದ್ದು ಕಾಣುತ್ತಿರುವುದು ಹಾಸ್ಯಾಸ್ಪದ. ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಶಾಸಕರು ತಮ್ಮ ಮಂಡಲಾಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಿ ಪತ್ರಿಕಾಗೋಷ್ಠಿ ನಡೆಸಲು ತಿಳಿಸಿ. ಅವಿವೇಕಿಯಂತೆ ಹೇಳಿಕೆ ನೀಡಿದರೆ ನ್ಯಾಯಾಲಯದ ಮೂಲಕ ಉತ್ತರ ನೀಡಬೇಕಾಗುತ್ತದೆ. ಈಗ ಬಿಜೆಪಿಯವರ ಕರ್ಮಕಾಂಡವನ್ನು ದಾಖಲೆ ಸಮೇತ ಬಿಡಿಸಿ ಇಡುತ್ತೇವೆ. ದಾಖಲೆಗಳನ್ನು ಸಂಬoಧಪಟ್ಟ ಇಲಾಖೆಗೆ ಕೇಳಿದ್ದೇವೆ ಹಾಗಾಗಿ ಮುಂದಿನ ವಾರದಿಂದ ಪ್ರಕೃತಿ ವಿಕೋಪ, ಮೆಂಟೇನನ್ಸ್ ಮುಂತಾದ ಕಾಮಗಾರಿಗಳಲ್ಲಿ ನುಂಗಿರುವ ಪಟ್ಟಿಯನ್ನು ಒಂದೊoದಾಗಿ ಜನರಿಗೆ ತಿಳಿಸಲಿದ್ದೇವೆ. ಬಿಜೆಪಿಯವರ ದಾರಿ ತಪ್ಪಿಸುವ ನಾಟಕಕ್ಕೆ ಜನರು ಮರುಳಾಗಬಾರದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top