ಕಾರವಾರ: ಯಶಸ್ಸು ಎಂಬುವುದು ಇಂದು ಮತ್ತು ನಾಳೆಯ ಪುಟ್ಟ ಪುಟ್ಟ ಪ್ರಯತ್ನಗಳ ಮೇಲೆ ಅವಲಂಬಿತವಾಗಿರುತ್ತದೆ. ಸಮಯದ ಬೆಲೆಯನ್ನು ಅರಿತವರೇ ಬಾಳಿನ ಬೆಲೆಯನ್ನು ಅರಿತಿರುತ್ತಾರೆ ಎಂದು ಬಿಐಟಿಎಸ್ ಕ್ಯಾಂಪಸ್ ಗೋವಾದ ಗ್ರಂಥಪಾಲಕರು ಹಾಗೂ ಇಲ್ಲಿನ ಹಿಂದೂ ಹೈಸ್ಕೂಲ್‌ನ ಮಾಜಿ ವಿದ್ಯಾರ್ಥಿಯೂ ಆಗಿರುವ ಡಾ.ಅನುರಾಧಾ ವಿ. ಹೇಳಿದರು.
ಅವರು ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಕರಿಯರ್ಸ್&ಯು’ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ಧ ಹಳದಿಪುರಕರ ಮಾತನಾಡಿದರು. ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ ಸ್ವಾಗತ ಕೋರಿದರು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ವಂದಿಸಿದರು. ಸುಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅಶೋಕ ದಿಕ್ಷಿತ್, ಮಂದಾಕಿನಿ ದಿಕ್ಷಿತ್ (ದಿಲ್ಲಿ), ಸುಮತಿ ದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಎನ್.ಬಂಟ ಹಾಗೂ ಮೂರೂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.
ಯಶಸ್ಸು ಪ್ರಯತ್ನಗಳ ಮೇಲೆ ಅವಲಂಬಿತ: ಡಾ.ಅನುರಾಧಾ
