• first
  Slide
  Slide
  previous arrow
  next arrow
 • ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅನಾಹುತ

  300x250 AD

  ಹೊನ್ನಾವರ: ತಾಲೂಕಿನ ಕೆಳಗಿನೂರು ಪಂಚಾಯತಿ ವ್ಯಾಪ್ತಿಯ ನಾಜಗಾರ ಸಮೀಪ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ.
  ನಾಜಗಾರ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಘಟನೆ ಸಂಭವಿಸಿದ್ದು, ಸಾರ್ವಜನಿಕರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಪರಿಶ್ರಮದಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೆಇಬಿಯವರ ಅವೈಜ್ಞಾನಿಕ ಕಾಮಗಾರಿಯಿಂದ ಘಟನೆ ಸಂಭವಿಸಿದೆ. ಸಮೀಪದಲ್ಲಿ ಅಂಗನವಾಡಿ ಕೇಂದ್ರ ಮತ್ತು ಶಾಲೆ, ಹತ್ತಾರು ಮನೆಗಳು ಇದ್ದವು. ಬಿಸಿಲಿನ ಸಮಯದಲ್ಲಿ ಬೆಂಕಿ ಒಣಹುಲ್ಲಿನ ಮೂಲಕ ತಿವ್ರಗೊಂಡು, ಸುತ್ತಮುತ್ತಲೂ ದಟ್ಟ ಹೊಗೆ ಆವರಿಸಿತ್ತು.
  ಘಟನೆ ಸಂಭವಿಸಿದಾಗ ಸ್ಥಳಿಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರಿಗೆ ವಿಷಯ ತಲುಪಿಸಿದರೂ ಸಿಬ್ಬಂದಿ ವಾಹನ ಕೈಕೊಟ್ಟ ಕಾರಣ ಸ್ಥಳಕ್ಕೆ ಆಗಮಿಸಲು ವಿಳಂಬವಾಯಿತು. ತುರ್ತು ಸಮಯದಲ್ಲಿ ನೆರವಿಗೆ ಧಾವಿಸಬೇಕಿದ್ದ ಇಲಾಖೆಯ ಅಧಿಕಾರಿಗಳ ವಾಹನದ ಸ್ಥಿತಿಯೇ ಹೀಗಾದರೆ ಹೇಗೆ ಸ್ಪಂದಿಸಲು ಸಾಧ್ಯ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂತು. ಇದರಿಂದ ಇಲಾಖೆಯ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದರು.

  300x250 AD
  Share This
  300x250 AD
  300x250 AD
  300x250 AD
  Back to top