Slide
Slide
Slide
previous arrow
next arrow

ಬರ್ಚಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಹುಲಿಯ ಶವ ಪತ್ತೆ; ತನಿಖೆಗೆ ವಿಶೇಷ ತಂಡ ರಚನೆ

300x250 AD

ದಾಂಡೇಲಿ: ತಾಲ್ಲೂಕಿನ ಬರ್ಚಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ನಾನಾಕೇಸರೊಡ್ಗಾ ಗ್ರಾಮದ ಸರ್ವೆ ನಂ.03 ಅರಣ್ಯ ಪ್ರದೇಶದಲ್ಲಿ ಒಂದು ಗಂಡು ಹುಲಿಯ ಶವವೊಂದು ಪತ್ತೆಯಾದ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಬಂದ ತಕ್ಷಣವೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಹುಲಿಯು 3- 4 ದಿನಗಳ ಹಿಂದೆ ಹುಲಿ ಹಾಗೂ ಇತರೆ ಬೇರೆ ಪ್ರಾಣಿಯೊಂದಿಗೆ ಸೆಣಸಾಟದಿಂದ ಮರಣ ಹೊಂದಿರಬಹುದೆoದು ಮತ್ತು ಹುಲಿಯ ದೇಹದ ಮೇಲಿನ ಗುರುತುಗಳನ್ನು ಪಶು ವೈದ್ಯಾಧಿಕಾರಿಗಳ ಪರಿಶೀಲನೆ ನಡೆಸಿದಾಗ ಕಂಡು ಬಂದಿರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮೃತಪಟ್ಟ ಹುಲಿಯ ಕೈ ಮತ್ತು ಕಾಲುಗಳನ್ನು ಹಾಗೂ ತಲೆಯನ್ನು ಯಾರೋ ಕಿಡಿಗೇಡಿಗಳು ಕತ್ತರಿಸಿರುವುದು ಕಂಡುಬಂದಿರುವುದರಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಹಾಗೂ ವನ್ಯಜೀವಿ ಕಾಯ್ದೆ 1972ರಂತೆ ಪ್ರಕರಣ ದಾಖಲಿಸಿ, ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ನ್ಯಾಯಾಲಯದ ಆದೇಶದ ಮೇರೆಗೆ ಹುಲಿ ದೇಹವನ್ನು ವಿಲೀನಗೊಳಿಸಿ ಮುಂದಿನ ತನಿಖೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ತನಿಖೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿ ಶ್ವಾನಗಳ ಮತ್ತು ವಿಧಿ ವಿಜ್ಞಾನದ ತಜ್ಞರ ಸಹಾಯದಿಂದ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ಬೆಳಗಾವಿ ಮತ್ತು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಬರ್ಚಿ ವಲಯಾರಣ್ಯಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top