ಭಟ್ಕಳ: ಇಲ್ಲಿನ ಝೇಂಕಾರ ಮೆಲೋಡಿಸ್ ಆರ್ಟ್ ಅಸೋಸಿಯೇಶನ್ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಇತ್ತೀಚೆಗೆ ಕಾರವಾರದಲ್ಲಿ ನಡೆದ ಭರತನಾಟ್ಯ ಸ್ಫರ್ಧೆಯಲ್ಲಿ ನವ್ಯಾ ಭಂಡಾರಿ ತೃತೀಯ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಶ್ವೇತಾ ನಾಯ್ಕ ಕೂಚಿಪುಡಿ ನೃತ್ಯದಲ್ಲಿ ಪ್ರಥಮ ಹಾಗು ಕರ್ನಾಟಕ ಸಂಗೀತ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸುಮನಾ ನಾಯ್ಕ ಕಥಕ್ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇತ್ತೀಚಿಗೆ ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲೋತ್ಸವದಲ್ಲಿ ಝೇಂಕಾರ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ನಾಗರಾಜ ಕಾಮತ್ ಹಾಗೂ ಕನಿಷ್ಕ ಮೊಗೇರ ಪ್ರಥಮ ಬಹುಮಾನ ಗೆಲ್ಲುವ ಮೂಲಕ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಪಡೆದಿದ್ದಾರೆ. ಈ ಉತ್ತಮ ಸಾಧನೆಗೆ ಕಾರಣೀಕರ್ತರಾದ ವಿದ್ಯಾರ್ಥಿಗಳಿಗೆ, ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರ ಹಾಗೂ ನೃತ್ಯ ಶಿಕ್ಷಕಿ ವಿದೂಷಿ ನಯನಾ ಪ್ರಸನ್ನ ಅವರಿಗೆ ಝೇಂಕಾರ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.