Slide
Slide
Slide
previous arrow
next arrow

ಬಸ್ ತಂಗುದಾಣ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

300x250 AD

ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾ.ಪಂ. ವ್ಯಾಪ್ತಿಯ ಕವಲಕ್ಕಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ೩.೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣವನ್ನು ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿ, ಜನತೆಯ ಅನುಕೂಲಕ್ಕಾಗಿ ಮುತುವರ್ಜಿ ವಹಿಸಿ ಬಹಳ ಸುಂದರವಾಗಿ ಬಸ್ ತಂಗುದಾಣ ನಿರ್ಮಾಣಗೊಂಡಿದೆ. ಬಸ್ ನಿಲ್ದಾಣ ಕೆಲಸದ ಪ್ರಾರಂಭದಲ್ಲಿ ತೊಂದರೆ ಬಂದರೂ ಹಠ ಬಿಡದೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ತಕರಾರು ಮಾಡುವವರು ಮುಂದೆ ಇದೆ ಬಸ್ ನಿಲ್ದಾಣದಲ್ಲಿ ನೆರಳು ಪಡೆಯುತ್ತಾರೆ, ಜನಪಯೋಗಿ ಕೆಲಸ ಮಾಡುವಾಗ ಅಡೆತಡೆ, ತಕರಾರು, ಪ್ರತಿಭಟನೆ, ಮನವಿ ಕೊಡುವ ಕೆಲಸ ಕೆಲವರು ಮಾಡುತ್ತಾರೆ. ನಾವು ಮನವಿ ಕೊಟ್ಟೆ ಕೆಲಸ ಆಗಿದೆ ಅನ್ನುವ ರೀತಿಯಲ್ಲಿ ಅವರು ವರ್ತಿಸುತ್ತಾರೆ. ಅದೆಲ್ಲವನ್ನು ಎದುರಿಸಿ ಸಾಧಿಸಬೇಕು ಎಂದರು.

300x250 AD

ಬಸ್ ತಂಗುದಾಣ ಕಟ್ಟಲು ಸ್ಥಳದಾನ ಮಾಡಿದ ಪರಮ ಹೆಗಡೆ ಇವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಮುಗ್ವಾ ಗ್ರಾ.ಪಂ. ಅಧ್ಯಕ್ಷೆ ಗೌರಿ ಅಂಬಿಗ, ಸದಸ್ಯರಾದ ಗೋವಿಂದ ಭಟ್ಟ, ಆಶಾ ಹೆಗಡೆ, ಸುರೇಶ ಶೆಟ್ಟಿ, ಎಚ್. ಆರ್.ಗಣೇಶ, ಬಾಲಚಂದ್ರ ನಾಯ್ಕ, ವಂದೂರ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ನಾರಾಯಣ ಹೆಗಡೆ, ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top