ಕಾರವಾರ: ಅಂಚೆ ಇಲಾಖೆಯು 2022ನೇ ಸಾಲಿನ 4ನೇ ತ್ರೈಮಾಸಿಕ ಅಂಚೆ ಅದಾಲತನ್ನು ಡಿಸೆಂಬರ್ 29ರ ಬೆಳಿಗ್ಗೆ 11.00 ಗಂಟೆಗೆ ಅಂಚೆ ಅಧಿಕ್ಷಕರು ಕಾರವಾರ ಇವರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.
ಈ ಅಂಚೆ ಅದಾಲತ್‌ನಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆ ಹಾಗೂ ದೂರುಗಳನ್ನು ಅಂಚೆ ಅಧೀಕ್ಷಕರು, ಕಾರವಾರ ವಿಭಾಗ, ಕಾರವಾರ ಇವರ ಕಾರ್ಯಾಲಯಕ್ಕೆ ಡಿಸೆಂಬರ್ 27ರವರೆಗೆ ತಲುಪುವಂತೆ ಕಳುಹಿಸತಕ್ಕದ್ದು.
ಈ ವಿಭಾಗೀಯ ಅಂಚೆ ಅದಾಲತ್ ನಲ್ಲಿ ಸಾಮಾನ್ಯ ಮಟ್ಟದ ಅಂದರೆ ಈ ವಿಭಾಗದ ಅಂಚೆ ಕಚೇರಿಗಳಿಂದ ಈಗ ಕೊಡುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ ಸೂಚನೆಗಳನ್ನಷ್ಟೇ ಚರ್ಚಿಸಲಾಗುವುದು. ಇಲಾಖೆಯ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಚರ್ಚಿಸಲಾಗುವುದಿಲ್ಲ. ಇಂತಹ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಬೇರೆ ಯಾವುದೇ ಸಮಯದಲ್ಲಿ ಬರೆದು ತಿಳಿಸಿದ್ದಲ್ಲಿ, ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುವುದು ಎಂದು ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.