ಶಿರಸಿ: ನಗರದ ಹೋಟೆಲ್ ಸಾಮ್ರಾಟ್ ಎದುರಿನ ನೆಮ್ಮದಿ ಕುಟೀರ ಆವರಣದಲ್ಲಿ ಇರುವ ರಂಗಧಾಮ ವೇದಿಕೆಯಲ್ಲಿ ಡಿ. 17 ಶನಿವಾರದಂದು ಮಧ್ಯಾಹ್ನ 3.30ಕ್ಕೆ ಯಕ್ಷಗೆಜ್ಜೆ (ರಿ) ಶಿರಸಿಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ನಾರಾಯಣ ಹೆಗಡೆ ಗೋಡೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ,ಮೈಸೂರು ಆಕಾಶವಾಣಿ ಕಾರ್ಯಕ್ರಮ ಸಂಯೋಜಕ ದಿವಾಕರ ಹೆಗಡೆ, ಯಕ್ಷಗಾನ ಕಲಾವಿದೆ ಶ್ರೀಮತಿ ಅಶ್ವಿನಿ ಕೊಂಡದಕುಳಿ, ಕುಮಾರಿ ತುಳಸಿ ಬೆಟ್ಟಕೊಪ್ಪ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಹೆಗಡೆ ವಹಿಸಲಿದ್ದಾರೆ. .
ಈ ವರ್ಷದ ಯಕ್ಷಗೆಜ್ಜೆ ಸನ್ಮಾನವನ್ನು ಸುರೇಶ ಹೆಗಡೆ ಹಕ್ಕಿಮನೆ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪ ಪಡೆಯಲಿದ್ದು, ಶ್ರೀಧರ ಹೆಗಡೆ ಹಣಗಾರ ಹಾಗೂ ವೆಂಕಟ್ರಮಣ ಹೆಗಡೆ ನೈಗಾರ ಸಾಧಕರ ಸನ್ಮಾನ ಸ್ವೀಕರಿಸಲಿದ್ದಾರೆ.
ನಂತರದಲ್ಲಿ ಯಕ್ಷಗೆಜ್ಜೆ ವಿದ್ಯಾರ್ಥಿಗಳಿಂದ ಭಾಗವತಿಕೆ, ಚಂಡೆ, ಮದ್ದಲೆ ರಂಗಪ್ರವೇಶ, ಪೂರ್ವರಂಗ, ಒಡ್ಡೋಲಗ, ಪ್ರಯಾಣ ಕುಣಿತ ಸೇರಿದಂತೆ ಮಕ್ಕಳ ಯಕ್ಷಗಾನ ವೃಷಸೇನ ಕಾಳಗ, ಹಾಗೂ ಮಹಿಳಾ ಯಕ್ಷಗಾನ ತರಣಿಸೇನ ಕಾಳಗ ಪ್ರದರ್ಶನಗೊಳ್ಳಲಿದೆ.
ಸಂಪೂರ್ಣ ಕಾರ್ಯಕ್ರಮದ ಹಿಮ್ಮೇಳದ ಜವಾಬ್ದಾರಿಯನ್ನು ಯಕ್ಷಗೆಜ್ಜೆ ಮಾರ್ಗದರ್ಶಕ ಗಜಾನನ ಭಟ್ಟ ತುಳಗೇರಿ, ಇನ್ನೋರ್ವ ಯಕ್ಷಗೆಜ್ಜೆ ಮಾರ್ಗದರ್ಶಕ ಶಂಕರ ಭಾಗವತ ಯಲ್ಲಾಪುರ, ಗಜಾನನ ಹೆಗಡೆ ಸಾಂತೂರು ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.