Slide
Slide
Slide
previous arrow
next arrow

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಆಯ್ಕೆ

300x250 AD

ದಾಂಡೇಲಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ 21 ಮಂದಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಚಾರ್ಯ ಹಾಗೂ ಶ್ರೀಬಸವೇಶ್ವರ ಮೂರ್ತಿ ನಿರ್ಮಾಣ ಸಮಿತಿಯ ಅಧ್ಯಕ್ಷ ಯು.ಎಸ್ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಪ್ರಮುಖರಾದ ಸಿದ್ದಪ್ಪ ಆರ್.ಕುರಗುಂದ ಮತ್ತು ಸಾಮಾಜಿಕ ಮುಖಂಡ ಶಿವಬಸವ ಚ.ನರೆಗಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೊರಗಲ್, ಸಹಕಾರ್ಯದರ್ಶಿಯಾಗಿ ಮಹಾಂತೇಶ ಬಿ. ಬಾದಾಮಿ, ಖಜಾಂಚಿಯಾಗಿ ಗುರಯ್ಯ ಶೇಖರಯ್ಯ ಅಣ್ಣಿಗೇರಿ ಹಾಗೂ ಸಮಿತಿಯ ಸದಸ್ಯರಾಗಿ ಪ್ರಕಾಶ ಜಿ.ಇ, ದೇವೆಂದ್ರಪ್ಪ ವಿ.ಎಚ್, ಸುಭಾಸ ಲಿಂಗಪ್ಪ ಬೈಲವಾಡ, ಚನ್ನಬಸಪ್ಪ ಮುರಗೊಡ, ಶಂಕರಯ್ಯ ಕೆ. ಹಿರೇಮಠ, ಚೇತನ ಕುಮಾರಮಠ, ನಾಗರಾಜ ಕಲಭಾವಿ, ದೊಡ್ಡನಗೌಡರ ಎಸ್. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

300x250 AD

ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀದೇವಿ ಮಲ್ಲಿಕಾರ್ಜುನ ಗಾಳಪ್ಪನವರ, ಕಾರ್ಯದರ್ಶಿಯಾಗಿ ಗೀತಾ ಅಶ್ವಿನ್ ಕುಮಾರ ಜುತ್ತಿ, ಸದಸ್ಯರಾಗಿ ಲೀಲಾವತಿ ತಿಪ್ಪಣ್ಣ ಕೊಳಚಿ, ಪಾರ್ವತಿ ಸಿದ್ಧಪ್ಪ ಕುರಗುಂದ, ಮೈತ್ರಾ ಆರ್. ಜಿಗಳಿ, ಮಹಾದೇವಿ ಭದ್ರಶೆಟ್ಟಿ, ಉಮಾ ಹನುಮಸಾಗರ ಆಯ್ಕೆಯಾಗಿದ್ದಾರೆ.

Share This
300x250 AD
300x250 AD
300x250 AD
Back to top