Slide
previous arrow
next arrow

ಛತ್ರಪತಿ ಶಿವಾಜಿ ಮೂರ್ತಿಯ ಭವ್ಯ ಮೆರವಣಿಗೆ

300x250 AD

ದಾಂಡೇಲಿ: ನಗರದ ಸಮೀಪದಲ್ಲಿರುವ ಮೌಳಂಗಿಯಲ್ಲಿ ಡಿ.16ರಂದು ಅನಾವರಣಗೊಳ್ಳಲಿರುವ ಶ್ರೀಛತ್ರಪತಿ ಶಿವಾಜಿ ಮೂರ್ತಿಯ ಭವ್ಯ ಮೆರವಣಿಗೆಗೆ ಹಿರಿಯ ವೈದ್ಯ ಡಾ.ಮೋಹನ ಪಾಟೀಲ್ ಚಾಲನೆ ನೀಡಿದರು.

ನಗರದ ಮರಾಠಾ ಭವನದಿಂದ ಆರಂಭಗೊoಡ ಮೆರವಣಿಗೆಯು ನಗರದ ಜೆ.ಎನ್.ರಸ್ತೆಯ ಮೂಲಕ ಬಂದು ಸೋಮಾನಿ ವೃತ್ತ ದಾಟಿ ಬರ್ಚಿ ರಸ್ತೆಯ ಮೂಲಕ ಮೌಳಂಗಿಗೆ ಸಂಚರಿಸಿತು. ಸೋಮಾನಿ ವೃತ್ತದಲ್ಲಿ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯವರು ಭವ್ಯ ಶಿವಾಜಿ ಮೂರ್ತಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು.

300x250 AD

ಮೆರವಣಿಗೆಯಲ್ಲಿ ಶ್ರೀಛತ್ರಪತಿ ಶಿವಾಜಿ ಮೂರ್ತಿ ನಿರ್ಮಾಣ ಸಮಿತಿಯ ಅಧ್ಯಕ್ಷ ಅಶ್ವಥ್ ಥೋರವತ್, ಉಪಾಧ್ಯಕ್ಷ ಶ್ರೀಕಾಂತ ಬಸವಣ್ಣಿ ಕಾಲಕುಂದ್ರಿ, ಕಾರ್ಯದರ್ಶಿ ಸಂದೀಪ್ ಥೋರವತ್, ಖಜಾಂಚಿ ತಾನಾಜಿ ಥೋರವತ್, ಗ್ರಾ.ಪಂ ಸದಸ್ಯರಾದ ಅಜಿತ್ ಥೋರವತ್ ಮತ್ತು ಸುನೀಲ ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು. ಮಹಿಳೆಯರು ಪೂರ್ಣಕುಂಭ ಕಲಶದೊಂದಿಗೆ ಮೆರವಣಿಗೆಯಲ್ಲಿ ಸಾಗುವುದರ ಮೂಲಕ ಮೆರವಣಿಗೆಯ ಶೋಭೆ ಹೆಚ್ಚಿಸಿದರು.

Share This
300x250 AD
300x250 AD
300x250 AD
Back to top