• Slide
  Slide
  Slide
  previous arrow
  next arrow
 • ಜಿಲ್ಲೆಯಲ್ಲಿ ನಿಷೇಧದ ನಡುವೆ ಎಗ್ಗಿಲ್ಲದೇ ಸಾಗಿದ ಅಕ್ರಮ ಮರಳು ದಂಧೆ

  300x250 AD

  ಅಂಕೋಲಾ: ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ ಹಿನ್ನಲೆಯಲ್ಲಿ ಮರಳಿನ ಅಭಾವ ಎದುರಾಗಲಿದ್ದು ಮರಳುಗಾರಿಕೆಗೆ ಅನುಮತಿ ಕೊಡುವಂತೆ ಹಲವರ ಆಗ್ರಹವಾಗಿತ್ತು. ಆದರೆ ಸರ್ಕಾರ ಮಾತ್ರ ಇನ್ನೂ ಅನುಮತಿ ಕೊಡಲು ಒಂದೆಡೆ ಹಿಂದೇಟು ಹಾಕುತ್ತಿದ್ದರೆ, ಇನ್ನೊಂದೆಡೆ ಇದರ ನಡುವೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಸಾಗಿದ್ದು ಅಧಿಕಾರಿಗಳು ಮೌನವಾಗಿದ್ದಾರೆ.

  ಸಿ.ಆರ್.ಜೆಡ್ ವಲಯದಲ್ಲಿ ತೆಗೆದ ಮರಳನ್ನ ಸ್ಥಳೀಯರ ಬಳಕೆಗಿಂತ ದಂದೆಯನ್ನ ಮಾಡಲಾಗುತ್ತಿದೆ ಎಂದು ಉಡುಪಿಯ ಪ್ರಕರಣ ಒಂದನ್ನ ಇಟ್ಟುಕೊಂಡು ರಾಷ್ಟ್ರೀಯ ಹಸಿರು ಪೀಠ ಕಳೆದ ಎಂಟು ತಿಂಗಳ ಹಿಂದೆ ಸಿ.ಆರ್.ಜೆಡ್ ವಲಯದಲ್ಲಿ ಮರಳುಗಾರಿಕೆ ಮಾಡದಂತೆ ಆದೇಶವನ್ನ ಹೊರಡಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರದ ಕಾಳಿ, ಅಂಕೋಲಾದ ಗಂಗಾವಳಿ, ಕುಮಟಾದ ಅಘನಾಶಿನಿ ಹಾಗೂ ಹೊನ್ನಾವರದ ಶರಾವತಿ ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು ಕಳೆದ ಮೇ ತಿಂಗಳಲ್ಲಿ ಈ ಎಲ್ಲಾ ಭಾಗದಲ್ಲೂ ಸಿ.ಆರ್.ಜೆಡ್ ವಲಯದಲ್ಲಿ ಮರಳುಗಾರಿಕೆ ಮಾಡುತ್ತಿದ್ದು ಹಸಿರು ಪೀಠದ ಆದೇಶ ಹಿನ್ನಲೆಯಲ್ಲಿ ಮರಳುಗಾರಿಕೆಯನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.

  ಸದ್ಯ ಕಳೆದ ಎಂಟು ತಿಂಗಳಿನಿಂದ ಮರಳುಗಾರಿಕೆ ಇಲ್ಲದೇ ಮರಳಿನ ಅಭಾವ ಎದುರಾಗುತ್ತಿದ್ದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮರಳು ತೆಗೆಯಲು ಅನುಮತಿ ಕೊಡುವಂತೆ ಒತ್ತಡವನ್ನ ಸಚಿವರ ಮಟ್ಟದಲ್ಲಿ ಹಾಕಲಾಗಿದೆ. ಇನ್ನೊಂದೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸಿ,ಆರ್.ಜೆಡ್ ವಲಯವಲ್ಲದ ಪ್ರದೇಶವನ್ನ ಗುರುತು ಮಾಡುವ ಕಾರ್ಯವನ್ನ ಸಹ ಮಾಡುತ್ತಿದ್ದು, ಜೊತೆಗೆ ಮಂಗಳೂರಿನಲ್ಲಿ ಮರಳುಗಾರಿಕೆಗೆ ಅನುಮತಿ ಕೊಟ್ಟಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊಡಲು ಚಿಂತನೆ ನಡೆಸುತ್ತಿದ್ದು, ಕಾರ್ಯರೂಪಕ್ಕೆ ಮಾತ್ರ ತರಳು ವಿಳಂಬ ಮಾಡುತ್ತಿದ್ದಾರೆ.

  ಇದರ ನಡುವೆ ಕಾರವಾರದ ಕಾಳಿ ನದಿಯಲ್ಲಿ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ಮರಳು ಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು ಅಧಿಕಾರಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ. ಕಾರವಾರದಲ್ಲಿ ಸಣ್ಣ ಸಣ್ಣ ವಾಹನದ ಮೂಲಕ ಮರಳ ಸಾಗಿಸಿದರೆ ಅಂಕೋಲಾ ಮತ್ತು ಕುಮಟಾ ತಾಲೂಕಿನಲ್ಲಿ ಲಾರಿಗಳ ಮೂಲಕವೇ ಅಕ್ರಮ ಮರಳನ್ನ ಸಾಗಾಟ ಮಾಡುತ್ತಿದ್ದಾರೆ. ಇನ್ನು ಹೊನ್ನಾವರದ ಶರಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದ ಮರಳು ಶಿರಸಿ, ಸಿದ್ದಾಪುರ ಭಾಗಕ್ಕೆ ಎಗ್ಗಿಲ್ಲದೇ ಹೋಗುತ್ತಿದ್ದರೆ, ಅಂಕೋಲಾದ ಮರಳು ಯಲ್ಲಾಪುರ, ಮುಂಡಗೋಡ ಭಾಗಕ್ಕೆ ಹೋಗುತ್ತಿದೆ. ಇನ್ನು ರಾಮನಗರದ ಕೆಲ ಹಳ್ಳಗಳಲ್ಲಿ ಹಲವು ವÀರ್ಷಗಳಿಂದ ನಿಂತಿದ್ದ ಅಕ್ರಮ ಮರಳುಗಾರಿಕೆ ಮತ್ತೆ ತಲೆ ಎತ್ತಿದ್ದು ಎಗ್ಗಿಲ್ಲದೇ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದಾರೆ.

  ಸರ್ಕಾರ ಒಂದೆಡೆ ಅಧಿಕೃತವಾಗಿ ಮರಳು ತೆಗೆಯುವುದಕ್ಕೆ ಹಿಂದೇಟು ಹಾಕುತ್ತಿದ್ದರೆ, ಇನ್ನೊಂದೆಡೆ ಅಕ್ರಮ ಮರಳುಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾಗಿದ್ದ ರಾಜಧನ ಲೂಟಿಯಾಗುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಅಗತ್ಯ ಇದೆ ಎನ್ನುವ ಕಾರಣವನ್ನ ನೀಡಿ ಅಧಿಕಾರಿಗಳು ಮರಳುಗಾರಿಕೆ ಮಾಡಲು ಮೌನದ ಮೂಲಕವೇ ಸಮ್ಮತಿ ಕೊಡುತ್ತಿದ್ದು, ಸರ್ಕಾರದ ಮೂಲಕ ಅಧಿಕೃತವಾಗಿಯೇ ಮರಳುಗಾರಿಕೆ ಕೊಟ್ಟು ಜನರಿಗೆ ಸಹಾಯ ಮಾಡಲಿ. ಅದನ್ನ ಬಿಟ್ಟು ಅಕ್ರಮಕ್ಕೆ ಅವಕಾಶ ಕೊಟ್ಟು ರಾಜಧನ ಪೋಲಾಗುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

  300x250 AD

  ಹಣ ಮಾಡುವ ದಂಧೆಯಾದ ಅಕ್ರಮ ಚಟುವಟಿಕೆ

  ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ತೆಗೆಯಲು ಅವಕಾಶ ಇಲ್ಲದ ಹಿನ್ನಲೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಆದರೆ ಇದು ಅಕ್ರಮ ಚಟುವಟಿಕೆ ಮಾಡುವವರಿಗಿಂತ ಹಲವರಿಗೆ ಹಣ ಮಾಡುವ ದಂದೆಯಾದOತಾಗಿದೆ.

  ಸರ್ಕಾರದ ಹಲವು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಈ ದಂದೆಯ ಜೊತೆ ಕೈ ಜೋಡಿಸಿ ಹಣ ಪಡೆಯುತ್ತಿದ್ದರೆ, ಇನ್ನೊಂದೆಡೆ ಹಲವರು ಆರ್.ಟಿ.ಐ ಇನ್ನಿತರ ಅಸ್ತ್ರವನ್ನ ಇಟ್ಟುಕೊಂಡು ದಂದೆ ಮಾಡುವವರಿಗೆ ಹೆದರಿಸಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಅಕ್ರಮ ಚಟುವಟಿಕೆಗೆ ಸಾಥ್ ನೀಡಲೆಂದು ಹಲವರ ಕೈ ಸೇರುತ್ತಿದೆ ಎನ್ನಲಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top