• Slide
    Slide
    Slide
    previous arrow
    next arrow
  • ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

    300x250 AD

    ಕಾರವಾರ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವು 2022- 23ನೇ ಸಾಲಿನ ಉಚಿತ ಕೌಶಲ್ಯ ಆಧಾರಿತ ಉದ್ಯಮಶೀಲತೆ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ತರಬೇತಿಯಲ್ಲಿ ಲೈಫ್ ಸ್ಕಿಲ್, ಹ್ಯಾಂಡಿಕ್ರಾಫ್ಟ್ ಮತ್ತು ಬೇಕರಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಉತ್ತರ ಕನ್ನಡ ಜಿಲ್ಲೆಯವರಾಗಿರಬೇಕು, 15ರಿಂದ 29 ವಯೋಮಿತಿಯಲ್ಲಿರಬೇಕು, ತರಬೇತಿಯು ಡಿಸೆಂಬರ್ 22 ರಿಂದ ಪ್ರಾರಂಭವಾಗುವದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 17ರ ಒಳಗಾಗಿ ತಮ್ಮ ಹೆಸರನ್ನು ನೆಹರು ಯುವ ಕೇಂದ್ರ, ಒಂದನೇ ಮಹಡಿ, ಜಿಲ್ಲಾಧಿಕಾರಿಗಳವರ ಕಚೇರಿ, ಕಾರವಾರ ಕಚೇರಿಗೆ ನೀಡಬೇಕು.

    300x250 AD

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449992195, 08382226965 ಗೆ ಸಂಪರ್ಕಿಸಿ ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top