Slide
Slide
Slide
previous arrow
next arrow

ಭೀಮಣ್ಣನ ಕುರಿತು ಅಂತರಾಳದ ಮಾತನಾಡಿದ ಕಾಗೇರಿ

300x250 AD

ಶಿರಸಿ: ರಾಜಕೀಯ ಕ್ಷೇತ್ರದಲ್ಲಿ ಪರಸ್ಪರರ ನಡುವಿರುವ ವೈಮನಸ್ಸುಗಳನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಹಿರಂಗವಾಗಿ ತೋರ್ಪಡಿಸುತ್ತೇವೆ. ಆದರೆ ಅಂತರಾಳದಲ್ಲಿ ಮಾತ್ರ ಪರಸ್ಪರರ ನಡುವಿರುವ ಪ್ರೀತಿ, ವಿಶ್ವಾಸ ಯಾವತ್ತೂ ಶಾಶ್ವತವಾಗಿರುತ್ತದೆ ಎಂಬುವದಕ್ಕೆ ಭೀಮಣ್ಣ ನಾಯ್ಕ ಉತ್ತಮವಾದ ಉದಾಹರಣೆಯಾಗಿದ್ದಾರೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಅಂಬೇಡ್ಕರ್ ಭವನದಲ್ಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ಟಿ.ನಾಯ್ಕ ಹುಟ್ಟುಹಬ್ಬದ ಅಂಗವಾಗಿ ಭೀಮಣ್ಣ ನಾಯ್ಕ ಅಭಿಮಾನಿ ಬಳಗದವರು ಪಕ್ಷಾತೀತವಾಗಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭೀಮಣ್ಣನವರು ರಾಜಕೀಯಕ್ಕಿಂತ ಕೃಷಿಯಲ್ಲಿ ತಮ್ಮನ್ನು ಹೆಚ್ಚಿಗೆ ತೊಡಗಿಸಿಕೊಂಡವರು. ಮುಖ್ಯವಾಗಿ ಅವರು ಅಡಿಕೆ ಕೃಷಿಕರು. ನಂತರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತ ಬರುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರು ಪ್ರವಾಸಿಗರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ ಹೊಟೆಲ್ ಕಟ್ಟಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಳ್ಳೆಯ ಕೆಲಸಗಾರರನ್ನು ಗುರುತಿಸಿ ಅವರು ಹುಟ್ಟುಹಬ್ಬದ ಸಂಧರ್ಭದಲ್ಲಿಯಾದರೂ ಗೌರವಿಸುವುದು ಒಳ್ಳೆಯ ಕೆಲಸ. ಅವರ ಅಭಿಮಾನಿಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೇರಿ ಮಾಡುತ್ತಿರುವುದು ನನಗೂ ಖುಷಿ ತಂದಿದೆ ಎಂದರು.

ಕೆಪಿಸಿಸಿ ಉಪಾಧ್ಕ್ಷ ಐವಾನ್ ಡಿಸೋಜಾ ಮಾತನಾಡಿ, ಭೀಮಣ್ಣ ನಾಯ್ಕರು ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಬೇಕೆನ್ನುವುದು ನಮಗೂ ಆಶಯವಿದೆ. ದೇವರು ಆದಷ್ಟು ಬೇಗ ನಮ್ಮೆಲ್ಲರ ಆಸೆಯನ್ನು ಈಡೇರಿಸಲೆಂದು ಪ್ರಾರ್ಥಿಸುತ್ತೇನೆ. ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಜನರನ್ನು ಅತೀ ಹತ್ತಿರದಿಂದ ಪ್ರೀತಿಯಿಂದ ಕಂಡವರೆಂದು ಹೇಳಿದರು.

300x250 AD

ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಮಧು ಬಂಗಾರಪ್ಪ, ಭೀಮಣ್ಣನವರ ನಡೆನುಡಿಯಲ್ಲಿ ನಮ್ಮ ತಂದೆಯವರನ್ನು ಕಾಣುತ್ತೇನೆ. ಅವರು ಯಾವತ್ತೂ ಶಾಂತ ಸ್ವಭಾವದ ವ್ಯಕ್ತಿಯಾಗಿ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರು ರಾಜಕೀಯವಾಗಿ, ಕೃಷಿಕರಾಗಿ, ಉದ್ಯಮದಾರರಾಗಿ ಯಶಸ್ಸನ್ನು ಕಂಡವರು. ಅವರಿಗೆ ಇದೇ ರೀತಿಯ ಪ್ರೀತಿ ಬೆಂಬಲ ಮುಂದಿನ ದಿನಗಳಲ್ಲಿಯೂ ನೀಡಬೇಕೆಂದು ಹೇಳಿದರು.

ಅಭಿಮಾನಿ ಬಳಗದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಭೀಮಣ್ಣ ನಾಯ್ಕ, ನಾನೂ ಈಗಲೂ ಕೃಷಿಕ. ಬಂಗಾರಪ್ಪ ಮತ್ತು ನನ್ನ ಸಹೋದರಿಯ ಆಶೀರ್ವಾದ ಹಾಗೂ ಮಧು ಬಂಗಾರಪ್ಪನವರ ಸಹಕಾರದಿಂದ ರಾಜಕೀಯದಲ್ಲಿ ಇಲ್ಲಿಯವರೆಗೂ ಬಂದಿದ್ದೇನೆ ಎಂದು ಹೇಳುವಾಗ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಒಬ್ಬ ಮನುಷ್ಯ ಯಾವುದೇ ಒಂದು ಸ್ಥಾನಕ್ಕೆ ಹೋಗಬೇಕೆಂದರೆ ಅದರ ಹಿಂದೆ ಪರಿಶ್ರಮ ಮತ್ತು ಜನರ ಪ್ರೀತಿ ವಿಶ್ವಾಸವಿರಬೇಕು. ಅದನ್ನು ಅಭಿಮಾನಿಗಳಿಂದಗಳಿಸಿದ್ದೇನೆ ಎನ್ನುವ ಸಂತೃಪ್ತಿ ಭಾವನೆ ನನ್ನದಾಗಿದೆ ಎಂದರು.

ವೇದಿಕೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top