• Slide
  Slide
  Slide
  Slide
  previous arrow
  next arrow
 • ಕಲಾಭಿಮಾನಿಗಳ ಮನ ಗೆದ್ದ ಕೊಂಕಣಿ ನಾಟಕ ‘ಅಡಕಾತ್ರಿಂತುಲೇ ಪಪ್ಪಳ’

  300x250 AD

  ಸಿದ್ದಾಪುರ: ಪಟ್ಟಣದ ಶ್ರೀ ಲಕ್ಷ್ಮೀವೆಂಕಟೇಶ ದೇವರ ವನಭೋಜನೋತ್ಸವದ ಪ್ರಯುಕ್ತ ಶ್ರೀ ವಿದ್ಯಾಧಿರಾಜ ನಾಟ್ಯಸಂಘ ಪ್ರದರ್ಶಿಸಿದ ಹಾಸ್ಯಭರಿತ ಕೊಂಕಣಿ ಸಾಮಾಜಿಕ ನಾಟಕ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಯಿತು.
  ಹೊಸಾಡ ಬಾಬುಟ್ಟಿ ನಾಯಕ ಇವರು ರಚಿಸಿರುವ ಮತ್ತು ಡಾ. ಸುರೇಶ ಗುತ್ತೀಕರ ಇವರು ನಿರ್ದೇಶಿಸಿದ ನಾಟಕದಲ್ಲಿ ಪಾತ್ರಧಾರಿಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಮೋಹನ ಭಂಡಾರಕರ ಬಿಳಗಿ ಇವರ ಜೊತೆಗೆ ಪಾತ್ರಧಾರಿಗಳಾಗಿ ಉದಯ ಕಾಮತ, ನಾಗೇಶ ಶಾನಭಾಗ, ವಿದ್ಯಾಧರ ಭಟ್, ಕಾರ್ತಿಕ ಕಾಮತ, ಸಾಕ್ಷಿ ಸುಜಿತ್ ಹುಲೇಕಲ್, ನಮ್ರತಾ ಮುಕುಂದ ಪೈ ಮತ್ತು ಕಾಶೀನಾಥ ಪೈ ಇವರುಗಳ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಎರಡು ರಂಜಿಸುವಲ್ಲಿ ಸಫಲವಾಯಿತು.
  ಈ ಸಂದರ್ಭದಲ್ಲಿ ಸಮಾಜಸೇವೆಗಾಗಿ ವಿಜಯದೀಪ ಕಾಮತ ಮತ್ತು ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಸ್ವರ್ಣ ಪದಕ ವಿಜೇತ ಕುಮಾರಿ ನೀತಾ ಶ್ರೀಕರ ಭಟ್ ಇವರನ್ನು ಸನ್ಮಾನಿಸಲಾಯಿತು.

  300x250 AD
  Share This
  300x250 AD
  300x250 AD
  300x250 AD
  Back to top