Slide
Slide
Slide
previous arrow
next arrow

ಜಗತ್ತಿನಲ್ಲಿ ಕಲೆಯೊಂದು ಅತ್ಯಂತ ಶಕ್ತಿಯುತವಾದ ಮಾಧ್ಯಮ: ಗೋಪಾಲಕೃಷ್ಣ ಭಾಗವತ

300x250 AD

ಸಿದ್ದಾಪುರ: ಕಲೆಯ ಬೆಳವಣಿಗೆಯ ಜೊತೆ ಜೊತೆಗೆ ಮಾನವ ವಿಕಾಸದ ಹಾದಿಯೂ ಇದೆ ಎನ್ನುವುದನ್ನು ಮರೆಯಲಾಗದು. ಇಂತಹ ಸಂದರ್ಭದಲ್ಲಿ ಸಂಘಟನೆಯ ಮಹತ್ವವನ್ನು ಅರಿತು ಅದರ ಉಳಿಸಿಕೊಳ್ಳುವತ್ತ ನಾವು ಗಮನಹರಿಸಬೆಕಗಿದೆ. ಸಮಾಜವು ಸಂಘಟನೆಗಳಿಗೆ ನೈತಿಕ ಬೆಂಬಲವನ್ನು ನೀಡಬೇಕಾದ ಅಗತ್ಯ ಇದೆ. ಈ ಜಗತ್ತಿನಲ್ಲಿ ಕಲೆಯೊಂದು ಅತ್ಯಂತ ಶಕ್ತಿಯುತವಾದ ಮಾಧ್ಯಮ ಎಂದು ಯಕ್ಷರಂಗ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ್ ಕಡತೊಕಾ ಹೇಳಿದರು.
ಅವರು ತಾಲೂಕಿನ ಇಟಗಿಯ ರಾಮೇಶ್ವರ ದೇವಾಯಲದಲ್ಲಿ ನಾಲ್ಕು ದಿನಗಳ ಕಾಲ ಇಟಗಿಯ ಕಲಾಭಾಸ್ಕರ ಸಂಸ್ಥೆಯವರು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ‘ಇಟಗಿ ಯಕ್ಷೋತ್ಸವ-2022’ವನ್ನು ಮೊದಲ ದಿನ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಸಶಕ್ತವಾದ ಎಲ್ಲ ವಿಭಾಗಗಳಿಂದಲೂ ಪರಿಪುಷ್ಟವಾದ ಹಾಗೂ ಅತ್ಯಂತ ಕಲಾ ಸಮೃದ್ಧಿಯಿಂದ ಕೂಡಿದ ಯಕ್ಷಗಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಕಂಕಣ ಬದ್ಧರಾಗಬೇಕಿದೆ. ಅದಕ್ಕಾಗಿ ಒಮ್ಮನಸ್ಸಿನಿಂದ ದುಡಿಯೋಣ ಎಂದರು.
ಇಟಗಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಂದ್ರಗೌಡ ಮರಲಿಗೆಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕನ್ನಡ ಭಾಷೆಯ ಸೊಗಡನ್ನು ಬಿಂಬಿಸುವ ಈ ಯಕ್ಷಗಾನ ಕಲೆಯು ನಮ್ಮ ಉಸಿರಾಗಿದೆ.ನಮ್ಮಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರು.
ರಾಮೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಗಜಾನನ ಹೆಗಡೆ ಕೊಡ್ತಗಣಿ, ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ಹೆಗಡೆ ಓಜಗಾರ, ಗ್ರಾ.ಪಂ. ಸದಸ್ಯರಾದ ರಾಮಚಂದ್ರ ನಾಯ್ಕ ಹರಗಿ ಇವರುಗಳೆಲ್ಲ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿನಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿದರು.ನಂತರ ಕವಿ ಹಲಸಿನಳ್ಳಿ ನರಸಿಂಹ ಶಾಸ್ತಿç ವಿರಚಿತ ‘ಭೀಷ್ಮ ಪ್ರತಿಜ್ಞೆ’ ಎಂಬ ಯಕ್ಷಗಾನ ಪ್ರದರ್ಶನವು ನಡೆಯಿತು.

300x250 AD
Share This
300x250 AD
300x250 AD
300x250 AD
Back to top