Slide
Slide
Slide
previous arrow
next arrow

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ:  ದಾಂಡೇಲಿಯಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ  ಶಾಲಾ ಪ್ರತಿಭಾ  ಕಾರಂಜಿಯಲ್ಲಿ ನಮ್ಮ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ ಸ್ಫರ್ಧೆಗಳಲ್ಲಿ  ಪ್ರಶಸ್ತಿಗೆ  ಭಾಜನರಾಗಿದ್ದಾರೆ 
ಪ್ರೌಢ ಶಾಲಾ ವಿಭಾಗ: 9ನೇ ವರ್ಗದ ಪ್ರತೀಕ್ಷಾ ಭಟ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, 9ನೇ ವರ್ಗದ ನಿಖಿತಾ ಭಟ್  ಚರ್ಚಾ ಸ್ಫರ್ಧೆಯಲ್ಲಿ  ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಪ್ರಾಥಮಿಕ ಶಾಲಾ ಹಿರಿಯರ ವಿಭಾಗ:
6 ನೇ ವರ್ಗದ ಅನ್ವಿತಾ ಆರ್.ವಿ. ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕನ್ನಡ ಭಾಷಣ ತೃತೀಯ, 6 ನೇ ವರ್ಗದ ವರ್ಷಿಣಿ ಹೆಗಡೆ ಸಂಸ್ಕೃತ ಧಾರ್ಮಿಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,5  ನೇ ವರ್ಗದ ಪ್ರತೀಕ ಹೆಗಡೆ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ .ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ವೃಂದ,ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top