ಶಿರಸಿ: 2022-23 ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯು ಇತ್ತೀಚಿಗೆ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರದ ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿರಸಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ ಬಡಿಗೇರ, ವಾಸವಿ ಜೋಶಿ, ತೈಬಾ ತಬಸ್ಸುಮ್, ಅನನ್ಯಾ ಹೆಗಡೆ, ಪ್ರಾರ್ಥನಾ ಪ್ರಸನ್ನ ಹೆಗಡೆ, ಸ್ಪೂರ್ತಿ ಗುನಗ ಭಾಗವಹಿಸಿದ್ದು, ಈ ನೃತ್ಯಕ್ಕೆ ಸಿದ್ಧಿ ಜನಾಂಗದ ದೀಪಾ ಸಿದ್ದಿರವರ ತರಬೇತಿ, ಸಹಶಿಕ್ಷಕಿಯರಾದ ಶ್ರೀಮತಿ ಸುಜಾತ ವಝೆ, ಶ್ರೀಮತಿ ಸೀತಾ ವಿ. ಭಟ್, ಶ್ರೀಮತಿ ದೀಪಾ ಶಶಾಂಕ ಹೆಗಡೆ ಇವರ ಹಿನ್ನೆಲೆ ಮಾರ್ಗದರ್ಶನ, ಅಯನಾ ವಾಯ್., ದಿಶಾ ಹೆಗಡೆ, ಸ್ಪೂರ್ತಿ ಹೆಗಡೆ, ಸಹನಾ ಶಟ್ಟಿ, ಸುವಿಧಾ ಹೆಗಡೆ, ಆದಿತ್ಯ ಜೋಷಿ ಈ ವಿದ್ಯಾರ್ಥಿಗಳ ಹಿನ್ನೆಲೆ ಗಾಯನ, ವಾದನ ಪುಷ್ಟಿ ನೀಡಿತ್ತು.
ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಿ ಶಿಕ್ಷಕರಿಗೆ, ತರಬೇತಿ ನೀಡಿದ ತರಬೆತುದಾರರಿಗೆ ಹಾಗೂ ಸಹಕರಿಸಿದ ಪಾಲಕರಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ಶಾಲೆಯ ಶಿಕ್ಷಕ ಶಿಕ್ಷಕೇತರ ವೃಂದ, ಸಮಸ್ತ ಲಯನ್ಸ್ ಶಾಲಾ ಪಾಲಕ ಪರಿವಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.