Slide
Slide
Slide
previous arrow
next arrow

ವಿವಿಧ ಸ್ಪರ್ಧೆಗಳಲ್ಲಿ ವಾನಳ್ಳಿ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ಇತ್ತೀಚಿಗೆ ದಾಂಡೇಲಿಯಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ  ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ಸ್ವಾತಿ ಗಣಪತಿ ಭಟ್ ಕನ್ನಡ ಭಾಷಣದಲ್ಲಿ ಪ್ರಥಮ, ಪೂರ್ಣ ದತ್ತಾತ್ರೇಯ ವೈದ್ಯ ರಂಗೋಲಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ  ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಶಾಂತ ಕೃಷ್ಣಮೂರ್ತಿ ಹೆಗಡೆ ಪ್ರಥಮ ಸ್ಥಾನ ಪಡೆದು ಶಿರಸಿ ತಾಲೂಕಿನ ಇಬ್ಬರು ವಿದ್ಯಾರ್ಥಿಗಳ ತಂಡದಲ್ಲಿ ಒಬ್ಬನಾಗಿ  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಎಸ್.ಡಿ.ಎಂಸಿ. ಶಿಕ್ಷಕ ವೃಂದ ಮತ್ತು ಪಾಲಕರು ಅಭಿನಂದಿಸಿ,ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top