Slide
Slide
Slide
previous arrow
next arrow

ವೃತ್ತಿ ಶಿಕ್ಷಣ ಕಲಿಕೋತ್ಸವ: ಗೋಳಿ ಪ್ರೌಢಶಾಲಾ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ

300x250 AD

  ಶಿರಸಿ:   ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ, ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಸಹಯೋಗದಲ್ಲಿ ಶಿರಸಿಯ ಭೂಮಾ ಪ್ರೌಡಶಾಲೆಯಲ್ಲಿ  ನಡೆದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣ  ಕಲಿಕೋತ್ಸವದಲ್ಲಿ ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಅನನ್ಯಾ ಮಹೇಂದ್ರ ಹೆಗಡೆ ಅಮ್ಮಚ್ಚಿ, ಕುಮಾರಿ ಅನ್ವಿತಾ ಮಹೇಶ ಭಟ್ಟ ನಾಡಗುಳಿ,ಕುಮಾರಿ ಮಾನ್ಯಾ ವಿದ್ಯಾಧರ ಮಡಿವಾಳ ಹಿತ್ಲಕೈ, ಕುಮಾರಿ ದಾಯಿ ಹಲಿಮಾ ಆಝಾದ್ ಶೇಖ್ ಹನುಮಂತಿ ಇವರುಗಳು ಭಾಗವಹಿಸಿ ಹೊಲಿಗೆ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

  ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷ ಎಮ್. ಎಲ್. ಹೆಗಡೆ ಹಲಸಿಗೆ ಇವರು ಮಕ್ಕಳಿಗೆ ಸ್ಪೂರ್ತಿ ತುಂಬುವುದರ ಮೂಲಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾರಾಯಣ ದೈಮನೆ ಮತ್ತು ಶಿಕ್ಷಕ ವೃಂದದವರು ಅಪಾರ ಹರ್ಷವನ್ನು ವ್ಯಕ್ತಪಡಿಸಿದ್ದು,ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ. ಇವರುಗಳಿಗೆ ಶಾಲೆಯ ವೃತ್ತಿ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಶ್ರೀದೇವಿ ಪಾಟೀಲ್ ಇವರು ಮಾರ್ಗದರ್ಶನ ಮಾಡಿ ಯಶಸ್ಸಿಗೆ ಶ್ರಮಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top