ದಾಂಡೇಲಿ: ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ನಗರದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾಗಿರುವ ಗಾಂಧಿನಗರದ ಮಂಜುನಾಥ ಪಾಟೀಲ್ ಅವರ ನೇತೃತ್ವದಲ್ಲಿ ಒಟ್ಟು ಐವರು ಅಯ್ಯಪ್ಪ ಮಾಲಾಧಾರಿಗಳು ಶ್ರೀಅಯ್ಯಪ್ಪ ಮಂದಿರದಿಂದ ಯಾತ್ರೆಯನ್ನು ಆರಂಭಿಸಿದ್ದಾರೆ.
ಮಂಜುನಾಥ್ ಪಾಟೀಲ್ ಅವರು ಈ ಬಾರಿ 25ನೇ ವರ್ಷ ಶಬರಿ ಮಲೆ ಯಾತ್ರೆಯನ್ನು ಕೈಗೊಂಡ ಹಿನ್ನಲೆಯಲ್ಲಿ ಪಾದಯಾತ್ರೆಯ ಮೂಲಕ ಅಯ್ಯಪ್ಪನ ದರ್ಶನ ಮಾಡುವ ಸಂಕಲ್ಪವನ್ನು ತೊಟ್ಟಿದ್ದರು. ಅದರಂತೆ ಅಯ್ಯಪ್ಪನ ಮಾಲಾಧಾರಣೆ ಮಾಡಿ ಕಠಿಣ ವೃತಾಚರಣೆಯೊಂದಿಗೆ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಇರುಮುಡಿ ಕಟ್ಟಿ ಪಾದಯಾತ್ರೆ ಕೈಗೊಂಡಿದ್ದಾರೆ.
ಮಂಜುನಾಥ್ ಪಾಟೀಲ್ ಅವರ ಜೊತೆ ನಗರದ ಅಯ್ಯಪ್ಪ ಮಾಲಾಧಾರಿಗಳಾದ ಆಯುಷ್ ಪಾಟೀಲ್, ಸೋಮಲಿಂಗ್ ಪಾಂಡುರAಗ ಚೋರ್ಲೇಕರ್, ಪ್ರತಾಪ್ ಗುಂಡು ರಾಣೆ, ಮಹಾದೇವ ಕಾಮ್ರೇಕರ್ ಯ್ಯಪ್ಪನ ಯಾತ್ರೆಗೆ ಪಾದಯಾತ್ರೆಯ ಮೂಲಕ ಹೊರಟಿದ್ದಾರೆ. ಈ ತಂಡಕ್ಕೆ ಸಹಾಯಕರಾಗಿ ನಗರದ ಖಾಜಸಾಬ್ ಜಮಾಲಿಯವರು ಸೇವೆ ಸಲ್ಲಿಸುವುದರ ಮೂಲಕ ನಿಜಕ್ಕೂ ಅಯ್ಯಪ್ಪನ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪಾದಯಾತ್ರೆ ಕೈಗೊಂಡ ಮಂಜುನಾಥ್ ಪಾಟೀಲ್ ಅವರ ತಂಡವನ್ನು ನಗರದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಟಿ.ಆರ್.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳಾದ ವಿಶ್ವನಾಥ್ ಶೆಟ್ಟಿ, ಕೃಷ್ಣ ಪೂಜಾರಿ, ಎಸ್.ಸೋಮಕುಮಾರ್, ಅನಿಲ್ ದಂಡಗಲ್, ಸುರೇಶ್ ನಾಯರ್, ಗುರುಸ್ವಾಮಿ ಮೋಹನ ಸನದಿ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿದ್ದಾರೆ