Slide
Slide
Slide
previous arrow
next arrow

ಮಣ್ಣಿನಿಂದಲೇ ಮನುಕುಲದ ಉಳಿವು: ರಾಘವೇಶ್ವರ ಶ್ರೀ

300x250 AD

ಗೋಕರ್ಣ: ಮಣ್ಣಿನಿಂದಲೇ ಮನುಕುಲದ ಉಳಿವು. ಮನುಷ್ಯನ ಸ್ವಾಸ್ಥ್ಯ, ಸಮಾಜದ ಹಾಗೂ ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ. ಮಣ್ಣಿನ ಸಾರ ಸಂರಕ್ಷಣೆ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಸಾಯಿಲ್ ವಾಸು ತಂಡದಿoದ ಆಯೋಜಿಸಿದ್ದ ‘ನಮ್ಮ ಮಣ್ಣು ಹೇಗಿದೆ?’ ಎಂಬ ವಿಷಯ ಕುರಿತ ವಿಶೇಷ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಎಳವೆಯಲ್ಲೇ ಮಣ್ಣಿನ ಮಹತ್ವವನ್ನು ತಿಳಿಸಿಕೊಡುವ ಕಾರ್ಯ ಆಗಬೇಕು. ಮಣ್ಣು ಕೊಳಕು, ಕೆಸರು ಎಂಬ ಭಾವನೆ ಇಂದಿನ ನಗರ ವಾಸಿ ಮಕ್ಕಳಲ್ಲಿ ನಾವು ಮೂಡಿಸಿದ್ದೇವೆ. ಆದರೆ ಅದು ಪೂಜ್ಯ. ಮನುಕುಲದ ಉಳಿವಿಗೆ ಮಣ್ಣೇ ಆಧಾರ ಎಂದು ವಿಶ್ಲೇಷಿಸಿದರು. ‘ಮಣ್ಣಿನ ಮಕ್ಕಳೇ ಚಿನ್ನದ ಮಕ್ಕಳು’. ನಾವು ಮೊದಲು ನೆಲವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು. ಮಣ್ಣಿಗೆ ನಾವು ರಾಕ್ಷಸರಾಗಬಾರದು. ಮಣ್ಣಿಗೆ ನಾವು ಮಕ್ಕಳಾಗಬೇಕು ಎಂದು ಕಿವಿಮಾತು ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ ಮತ್ತು ಕಾಮದುಘ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಬಂದಗದ್ದೆ ಅವರು ಶ್ರೀ ಕೃಷ್ಣನು ಮಣ್ಣನ್ನು ತಿಂದ ಕಥೆಯ ಮೂಲಕ ಮಾತನ್ನು ಪ್ರಾರಂಭಿಸಿ ಮಣ್ಣು ಎಂದರೆ ನೆಲ. ಅದು ಸರಿಯಾಗಿದ್ದರೆ ಮಾತ್ರ ನಾವು ಅದರ ಅನುಗ್ರಹ ಪಡೆಯಲು ಸಾಧ್ಯ ಎಂದು ಬಣ್ಣಿಸಿದರು.
ಸಾಯಿಲ್ ವಾಸು ತಂಡದ ಪ್ರಭಾಕರ್ ಮತ್ತು ಶಿವಮೂರ್ತಿ ಅವರು ಸಾವಯವ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದರೆ, ರಾಸಾಯನಿಕ ಗೊಬ್ಬರವು ಭೂಮಿಯನ್ನು ಹಾಳುಮಾಡುತ್ತದೆ. ಹಾಗಾಗಿ ಮಣ್ಣನ್ನು ಕಾಪಾಡಿಕೊಂಡರೆ ನಮ್ಮ ಬದುಕು ಕಾಪಾಡಿಕೊಂಡ0ತೆ ಎಂದು ಹೇಳಿದರು. ಮಣ್ಣಿನಲ್ಲಿ ಫಲವತ್ತತೆಯ ಅಂಶ ಎಷ್ಟಿದೆ ಎಂಬುದನ್ನು ಪ್ರಯೋಗದ ಮೂಲಕ ಪ್ರಭಾಕರ್ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಮಕ್ಕಳೂ ಸ್ವತಃ ಆ ಪ್ರಯೋಗವನ್ನು ಮಾಡಿ ಮಣ್ಣಿನಲ್ಲಿರುವ ಫಲವತ್ತತೆಯನ್ನು ಕಂಡುಹಿಡಿಯುವ ಕಲೆ ಕರಗತ ಮಾಡಿಕೊಂಡರು.
ಏಳು ವಿವಿಧ ಜಾತಿಯ ಮಣ್ಣಿನಿಂದ ಹೇಗೆ ಬಣ್ಣಗಳನ್ನು ತಯಾರಿಸಿಕೊಂಡು ಚಿತ್ರವನ್ನು ಬಿಡಿಸಬಹುದು ಎಂಬುದನ್ನು ಮಕ್ಕಳಿಗೆ ಕಲಿಸಿಕೊಟ್ಟು ಮಕ್ಕಳಿಂದ ಚಿತ್ರವನ್ನು ಬಿಡಿಸಲಾಯಿತು. ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ್ ಪಡೀಲ್, ಗುರುಕುಲದ ನಿರ್ದೇಶಕ ಶ್ರೀಪಾದ ಭಟ್ಟ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ಟ, ಸಾರ್ವಭೌಮ ಗುರುಕುಲದ ಮುಖ್ಯೋಧ್ಯಾಪಕಿಯಾದ ಸೌಭಾಗ್ಯ ಭಟ್ಟ, ಗುರುಕುಲದ ಸಮನ್ವಯ ಅಧಿಕಾರಿ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಛಾಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ಅವರು ಸ್ವಾಗತಿಸಿದರು. ಮಾನಸ ಉಪಾಧ್ಯಾಯ ವಂದಿಸಿದರು.

ಗೋ ಆಧರಿತ ಕೃಷಿ ಪುನಶ್ಚೇತನಕ್ಕೆ ಕೃಷಿ ವಿವಿ ಮುಖ್ಯಸ್ಥರ ಒಕ್ಕೊರಲ ಆಗ್ರಹ
ಗೋ ಆಧರಿತ ಕೃಷಿ ವ್ಯವಸ್ಥೆಯ ಪುನಶ್ಚೇತನಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಸಾರ ಕಳೆದಕೊಂಡಿರುವ ಮಣ್ಣಿನ ಪುನರುಜ್ಜೀವನದ ಮೂಲಕ ಸುಸ್ಥಿರ ಮಣ್ಣು ಆರೋಗ್ಯ ಕಾಪಾಡಲು ಅಗತ್ಯ ಕಾರ್ಯಯೋಜನೆ ರೂಪಿಸಬೇಕು ಎಂದು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಸಂಶೋಧನಾ ಮುಖ್ಯಸ್ಥರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಸದೃಢ ಭವಿಷ್ಯಕ್ಕಾಗಿ ಸುಸ್ಥಿರ ಮಣ್ಣು; ಮಣ್ಣಿನ ಆರೋಗ್ಯಕ್ಕಾಗಿ ಮನೆಗೊಂದು ಗೋವು’ ಎಂಬ ಚಿಂತನ- ಮಂಥನ ಗೋಷ್ಠಿಯಲ್ಲಿ ಸಭೆ ಸೇರಿದ್ದ ರಾಜ್ಯದ ಐದು ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಸಂಶೋಧನಾ ಮುಖ್ಯಸ್ಥರು ಸರ್ಕಾರಕ್ಕೆ ಈ ಶಿಫಾರಸ್ಸು ಮಾಡಿದ್ದಾರೆ. ಚಿಪ್ಕೊ ಮಾದರಿಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮಹತ್ವ ನೀಡಬೇಕು, ವಿವೇಚನಾರಹಿತವಾಗಿ ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ತಡೆಯಬೇಕು ಮತ್ತು ಇದರ ಆರೋಗ್ಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ಸಲಹೆ ಮಾಡಿದೆ.
ಬೆಂಗಳೂರು ಕೃಷಿ ವಿವಿ ಕುಪತಿ ಡಾ.ಎಸ್.ವಿ.ಸುರೇಶ್, ಜಿಕೆವಿಕೆ ಆರ್‌ಐಓಎಫ್ ಡಾ.ಬೋರಯ್ಯ ಬಿ., ಧಾರವಾಡ ಕೃಷಿ ವಿವಿ ಡೀನ್ ಡಾ.ಎಚ್.ಬಿ.ಬಬಲಾದ, ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊಫೆಸರ್ ಡಾ.ರಮೇಶ್ ಭಟ್, ಡಾ.ಮಂಜುನಾಥ ಹೆಬ್ಬಾರ್, ರಾಯಚೂರು ಕೃಷಿ ವಿಜ್ಞಾನ ವಿವಿಯ ಪ್ರೊಫೆಸರ್ ಡಾ.ವೈ.ಎಸ್.ಅಮರೇಶ್, ಡಾ.ಆನಂದ್ ಕಾಂಬ್ಳೆ, ಶಿವಮೊಗ್ಗ ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top