Slide
Slide
Slide
previous arrow
next arrow

ಕೋಲ್ಡ್ರಿಂಕ್ಸ್ ವಾಹನದಲ್ಲಿ ಮದ್ಯ ಸಾಗಾಟ; ಈರ್ವರ ಬಂಧನ

300x250 AD

ಕುಮಟಾ: ಕೋಲ್ಡ್ರಿಂಕ್ಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿರುವಾಗ ಗಿಬ್ ಸರ್ಕಲ್ ಬಳಿ ದಾಳಿ ಮಾಡಿದ ಪೊಲೀಸರು, ಅಕ್ರಮ ಗೋವಾ ಮದ್ಯದ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ಹರ್ಕಡೆ ನಿವಾಸಿ ಕೃಷ್ಣ ಗೌಡ ಮತ್ತು ಮೂರೂರು ಕೋಟೆಹಕ್ಕಲ ನಿವಾಸಿ ಮಾರುತಿ ಮುಕ್ರಿ ಬಂಧಿತ ಆರೋಪಿಗಳಾಗಿದ್ದಾರೆ. ಕೋಲ್ಡ್ ಡ್ರಿಂಕ್ಸ್ ನಡುವೆ ಇದ್ದ 1540 ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು, ಕಳ್ಳ ಸಾಗಾಣಿಕೆಗೆ ಬಳಸಲಾದ ವಾಹನವನ್ನು ಕೂಡ ಜಪ್ತುಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top