Slide
Slide
Slide
previous arrow
next arrow

ಹಿರಿಯ ಪತ್ರಕರ್ತ ಜಿ.ಯು.ಭಟ್‌ಗೆ ಅಭಿಮಾನಿಗಳಿಂದ ಅಮೃತಾಭಿನಂದನೆಗೆ ಸಿದ್ಧತೆ

300x250 AD

ಹೊನ್ನಾವರ: ತಾಲೂಕಿನ ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರ ಅಕ್ಷರ ವ್ಯವಸಾಯವನ್ನು ಸುವರ್ಣ ಸಂಭ್ರಮವನ್ನಾಗಿಸಲು ಅಭಿಮಾನಿಗಳು ‘ಜೀಯು 75 ಅಮೃತಾಭಿನಂದನೆ’ ಕಾರ್ಯಕ್ರಮ ಆಯೋಜಿಸಿದ್ದು, ಡಿ.13ರಂದು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.
ಪತ್ರಕರ್ತರಾಗಿ, ಸಾಹಿತ್ಯ, ರಂಗಭೂಮಿ, ಕಿರುತೆರೆ, ಚಲನಚಿತ್ರ, ಸಹಕಾರ, ಶಿಕ್ಷಣ ಕೇತ್ರದ ಜೊತೆ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬಹುಮುಖ ಪ್ರತಿಭೆಯುಳ್ಳ ಅಪರೂಪದ ವ್ಯಕ್ತಿಯಾಗಿ ಹೊನ್ನಾವರ ಭಾಗದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೂಲತಃ ಕೆರೆಕೋಣ ಬೊಳ್ಗೆರೆ ಮೂಲದವರಾಗಿದ್ದು, ಪ್ರಸುತ್ತ ಪಟ್ಟಣದ ಡಿಎಫ್‌ಓ ಬಂಗ್ಲೆ ಸಮೀಪ ಪತ್ನಿ ತಾರಾ ಭಟ್ ಇವರೊಂದಿಗೆ ವಾಸವಾಗಿದ್ದಾರೆ.
ಪತ್ರಿಕೋದ್ಯಮದ ಮೂಲಕ ಜಿಲ್ಲೆ ಹಾಗೂ ತಾಲೂಕಿನ ಹಲವು ವಿಷಯವನ್ನು ಜನಪ್ರತಿನಿಧಿಗಳ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಅದೆಷ್ಟೋ ಸಮಸ್ಯೆಗಳಿಗೆ ಧ್ವನಿಯಾಗಿ ನ್ಯಾಯ ದೊರಕಿಸಿ ಕೊಡುವಲ್ಲಿ ಯಶ್ವಸಿಯಾಗಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ 50 ವರ್ಷ, ಸಂಯುಕ್ತ ಕರ್ನಾಟಕದಲ್ಲಿ 10 ವರ್ಷ, ಗ್ರಾಮ ವಿಕಾಸ ವಾರಪತ್ರಿಕೆಯಲ್ಲಿ ಸಂಪಾದಕರಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಈ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಂದ 20 ಸಾವಿರಕ್ಕೂ ಅಧಿಕ ಸಾಮಾಜಿಕ ವರದಿ, ಮೂರು ಸಾವಿರಕ್ಕೂ ಹೆಚ್ಚಿನ ಲೇಖನ, ಅಂಕಣ ಬರಹಗಳು ಪ್ರಕಟವಾಗಿರುದು ವಿಶೇಷವಾಗಿದೆ. ಶರಾವತಿ ಎಡಬಲ ನಿವಾಸಿಗಳಿಗೆ ಶರಾವತಿ ನದಿಯಿಂದ ಉದ್ಬವಿಸುವ ನೆರೆ ಸಮಸ್ಯೆ, ಲಿಂಗನಮಕ್ಕಿ ಜಲಾಶಯ ಭರ್ತಿ ಹಂತದಲ್ಲಿ ನೀರಿನ ಮಟ್ಟವನ್ನು ಪ್ರತಿದಿನವನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಜಗತ್ತಿಗೆ ಆವರಿಸಿದ ಕೋರೊನಾ ಸಮಯದಲ್ಲಿ ಕೋವಿಡ್ ಮಾಹಿತಿ, ಸರ್ಕಾರದ ಆದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ಪ್ರಕಟಿಸುವ ಮೂಲಕ ಜನಪರ ಕಾಳಜಿ ತೋರಿಸಿದ್ದರು.
‘ಶ್ರೀಧರ ಮುದ್ರಣಾಲಯ’ದ ಮೂಲಕ ಜನಮಾನಸದಲ್ಲಿ ಮುದ್ರೆಯೊತ್ತಿದ ಇವರು ಅನೇಕ ಪ್ರಿಂಟಿoಗ್, ಪೋಟೋ ರಿಯಾಯತಿ ದರದಲ್ಲಿ ಜನತೆಗೆ ನೀಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ತಮ್ಮ ಕಛೇರಿಯಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಮಾಹಿತಿಕೇಂದ್ರವನ್ನು ತೆರೆದು ಅಲ್ಲಿಯ ವೈದ್ಯಕೀಯ ಸೇವೆಯ ಮಾಹಿತಿಯನ್ನು ತಿಳಿಸುತ್ತಾ ಬಂದಿದ್ದಾರೆ. ಆ ಮೂಲಕ ಒಂದರ್ಥದಲ್ಲಿ ದಕ್ಷಿಣೋತ್ತರ ಕನ್ನಡವನ್ನು ಬೆಸೆಯುವ ‘ಜೀವನದಿ’ಯಂತೆ ಕಾರ್ಯನಿರ್ವಹಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ:

ಪತ್ರಿಕೋದ್ಯಮದ ಜೊತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಾ ಬಂದಿರುವ ಇವರು ‘ಉತ್ತರ ಕನ್ನಡ ಕಥೆ- ವ್ಯಥೆ’, ‘ಕರಾವಳಿ’, ‘ಇಳೆ ಕಾದಿದೆ ಮನ ಅರಳಿದೆ’, ‘ಮುರ್ಡೆಶ್ವರ ಮತ್ತು ಇಡಗುಂಜಿಯ ಕ್ಷೇತ್ರ ಪರಿಚಯ’, ‘ಕರ್ಮಯೋಗಿ ಡಾ.ಆರ್.ಎನ್.ಶೆಟ್ಟಿ’, ‘ಬಹುಮುಖಿ’, ‘ಅಕ್ಷರ ಭಾರತಿ’ ಎನ್ನುವ ಏಳು ಕೃತಿಗಳು ಇವರಿಂದ ಪ್ರಕಟಿತವಾಗಿ ಓದುಗರ ಮನ ಗೆದ್ದಿದೆ. ಸಾಂಸ್ಕೃತಿಕ ರಂಗದಲ್ಲಿಯೂ ತನ್ನದೆ ಆದ ಕೊಡುಗೆ ನೀಡಿದ್ದು, ‘ಜೋಕುಮಾರ ಸ್ವಾಮಿ’, ‘ಅಂಧಯುಗ’, ‘ಬೇಲಿ ಮತ್ತು ಹೊಲ’, ‘ಆಷಾಡದ ಒಂದು ದಿನ’ ನಾಟಕಗಳಲ್ಲಿ ನಿರ್ದೇಶನ ಜೊತೆಗೆ ನಟಿಸಿದ್ದಾರೆ. ಕಿರುತೆರೆಯಲ್ಲಿ ಹರಿಶ್ಚಂದ್ರ ಭಟ್ ‘ಶೋಧ’ ಧಾರವಾಹಿಯಲ್ಲಿ ಅಭಿನಯಿಸಿ, ಕಾಶಿನಾಥರ ‘ಅನುಭವ’, ಅಂಬರೀಶ ಜೊತೆ ‘ಗಿರಿಬಾಲೆ’ ಚಲನಚಿತ್ರದಲ್ಲಿ, ‘ಅಪ್ಸರಧಾರಾ’ ಕೊಂಕಣಿ ಮತ್ತು ಕನ್ನಡದಲ್ಲಿ ಚಲನಚಿತ್ರ, ಇತ್ತಿಚೀಗೆ ತೆರೆಕಂಡ ವಿಶಾಲರಾಜ್ ನಿರ್ದೇಶನದ ಸ್ವಾತಂತ್ರ‍್ಯ ಹೋರಾಟದ ಕಥೆ ಒಳಗೊಂಡ ‘ದಂಡಿ’ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಮಾಜಸೇವೆಯತ್ತ ಗಮನಿಸಿದರೆ ಕೆ.ಡಿ.ಸಿ.ಸಿ. ಬ್ಯಾಂಕ್, ತಾಲೂಕು ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕರಾಗಿ, ಜೇನು ಸೊಸೈಟಿ ಅಧ್ಯಕ್ಷರಾಗಿ, ಅರೇಅಂಗಡಿ ಎಸ್.ಕೆ.ಪಿ. ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಎಸ್.ಡಿ.ಎಂ.ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ.


ಪ್ರಶಸ್ತಿಗಳು

300x250 AD

ಜಿ.ಯು.ಭಟ್‌ರ ಸಾಧನೆ ಪರಿಗಣಿಸಿ ಜಿಲ್ಲಾ ಪತ್ರಕರ್ತರ ಸಂಘದಿ0ದ ಶಾಮರಾವ್ ಪ್ರಶಸ್ತಿ, 2002ರಲ್ಲಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ರಾಜ್ಯ ಪತ್ರಕರ್ತರ ಸಂಘದಿ0ದ ಡಿ.ವಿ.ಜಿ ಜನ್ಮದಿನೊತ್ಸವ ಪುರಸ್ಕಾರ, 2015ರಲ್ಲಿ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 2017ರಂದು ತಾಲೂಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ದಿನವೇ ನಾಗರಿಕ ಪತ್ರಿಕೆಯಿಂದ ‘ಜೀವನದಿ ಜೀಯು’ ವಿಶೇಷ ಸಂಚಿಕೆಯ ಗೌರವ, 2017ರಲ್ಲಿ ಡಾ.ಟಿ.ಎಂ.ಎ.ಪೈ ಆರೋಗ್ಯ ಸೇವಕ ಅವಾರ್ಡ್, 2018ನೇ ಸಾಲಿನ ಬೆಂಗಳೂರು ಸಮರ್ಥ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕೆಂಪೇಗೌಡ ಪ್ರಶಸ್ತಿ’ ಇವರಿಗೆ ಲಭಿಸಿದೆ.

ನಾದಾಭಿನಂದನೆ ಡಿ.13ಕ್ಕೆ
ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಡಿ.13ರಂದು ಬೆಳಿಗ್ಗೆ 10ಕ್ಕೆ ಸ್ಥಳೀಯ ಸಂಗೀತ ಕಲಾವಿದರಿಂದ ‘ನಾದಾಭಿನಂದನೆ’ ನಡೆಯುವುದು. 11.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು ಮಣಿಪಾಲ ಮೀಡಿಯಾ ನೆಟ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್.ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾದಂಬರಿಕಾರ ಗಜಾನನ ಶರ್ಮಾ ಅಭಿನಂದನ ನುಡಿಗಳನ್ನಾಡುವರು. ಅಭಿನಂದನಾ ಗ್ರಂಥ, ‘ಜೀವನದಿ’ ಹಾಗೂ ಜೀಯು ಅಂಕಣ ಬರಹಗಳ ‘ಜನವಾಣಿ’ ಬಿಡುಗಡೆಗೊಳ್ಳಲಿವೆ.

Share This
300x250 AD
300x250 AD
300x250 AD
Back to top