Slide
Slide
Slide
previous arrow
next arrow

ಎಂಇಎಸ್ ವಿರುದ್ಧ ಕರವೇ ಪ್ರತಿಭಟನೆ

300x250 AD

ದಾಂಡೇಲಿ: ಬೆಳಗಾವಿಯಲ್ಲಿ ಪದೇ ಪದೇ ಗಡಿ ವಿವಾದ ಕೆದಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮತ್ತು ಕನ್ನಡಿಗರ ಸಂಸ್ಥೆಯ ಮೇಲೆ ಹಲ್ಲೆ ನಡೆಸುತ್ತಿರುವ ಪುಂಡರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಹಾಗೂ ಎಂ.ಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕರವೇ (ನಾ) ಬಣದ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಮಾವೇಶಗೊಂಡ ಕರವೇ ಕಾರ್ಯಕರ್ತರು, ಎಂ.ಇ.ಎಸ್ ಸಂಘಟನೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿ ಮಾತನಾಡಿದ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸಾಧಿಕ್ ಮುಲ್ಲಾ, ಎಂ.ಇ.ಎಸ್ ಸಂಘಟನೆ ಪದೇ ಪದೇ ದುಷ್ಕೃತ್ಯಗಳನ್ನು ಮೆರೆಯುವುದರ ಜೊತೆಗೆ ಅಶಾಂತಿ ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಎಂ.ಇ.ಎಸ್ ಸಂಘಟನೆಯ ಪುಂಡಾಟಿಕೆ ಎಲ್ಲೆ ಮೀರಿ ನಡೆಯುತ್ತಿದ್ದು, ಸ್ವಾಭಿಮಾನಿ ಕನ್ನಡಿಗರಾದ ನಮ್ಮಿಂದ ಇನ್ನುಮುಂದೆ ಇಂತಹ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ನೆಲ, ಗಡಿ, ಜಲ, ಭಾಷೆಯ ವಿಚಾರ ಬಂದಾಗ ಕನ್ನಡಿಗರಾದ ನಾವು ಯಾಚವುದೇ ಹೋರಾಟಕ್ಕೂ ಸರ್ವ ಸನ್ನದ್ದವಾಗಿದ್ದೇವೆ ಎಂದರು.
ಕನ್ನಡ ನಮ್ಮ ಉಸಿರು. ಕನ್ನಡ ನಮ್ಮ ಬದುಕು, ಕನ್ನಡವೇ ನಮಗೆಲ್ಲ. ಹೀಗಿರುವಾಗ ಕನ್ನಡದ ವಿಚಾರ ಬಂದಾಗ ನಾವು ಎಂಥಹ ತ್ಯಾಗಕ್ಕೂ ಸಿದ್ಧ ಎಂದ ಅವರು, ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸುವುದರ ಜೊತೆಗೆ ಪುಂಡಾಟಿಕೆ ಮಾಡುವವರ ಮೇಲೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಪ್ರಮುಖರುಗಳಾದ ಮಂಜುನಾಥ್, ಬಾಳು ಗೋಕಾಕ್, ಮುಜೀಬಾ ಚಭ್ಭಿ, ಮಂಜುಳಾ, ಶೆಹಜಾದಿ ಕುಸಲಾಪುರ, ಲೀಲಾ ಮಾದರ, ಆಯಿಷಾ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top