ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಮಾರ್ಗ ಹಾಗೂ ಪರಿವರ್ತಕ ಕೇಂದ್ರಗಳ ನಿರ್ವಹಣಾ ಅಭಿಯಾನ ಕೈಗೊಳ್ಳುವುದರಿಂದ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿoದ ಪಟ್ಟಣ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ಡಿ.12, ಸೋಮವಾರ ಬೆಳಿಗ್ಗೆ 9.30 ಘಂಟೆ ಇಂದ ಸಾಯಂಕಾಲ 6 ಘಂಟೆವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗವಾದ ದೇವನಳ್ಳಿ ಹಾಗೂ ಡಿ.13 ಮಂಗಳವಾರದಂದು ಬೆಳಿಗ್ಗೆ 9.30 ಘಂಟೆ ಇಂದ ಸಾಯಂಕಾಲ 6 ಘಂಟೆವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗವಾದ ಅಂಡಗಿ ಹಾಗೂ ತಿಗಣಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.