• Slide
    Slide
    Slide
    previous arrow
    next arrow
  • ಶೇ 30ರಷ್ಟು ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಕೆಆರ್‌ಎಸ್‌ನಿಂದ ಟಿಕೆಟ್

    300x250 AD

    ಕಾರವಾರ: ಮುಂಬರುವ ವಿಧಾನಸಭಾ ಚುನಾವಣೆಗೆ ಶೇ 30ರಷ್ಟು ಮಹಿಳೆಯರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧೆಗೆ ಟಿಕೆಟ್ ನೀಡಲಾಗುತ್ತಿದ್ದು, ಇದಕ್ಕಾಗಿ ಸ್ಪರ್ಧೆಗೆ ಬಯಸುವ ಮಹಿಳೆಯರಿಗೆ ಸಂದರ್ಶನ ಏರ್ಪಡಿಸಲಾಗಿದೆ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಗಾಗಿ ಈಗಾಗಲೇ 170ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿ, ಪ್ರಾಮಾಣಿಕವಾಗಿ ರಾಜಕಾರಣದಲ್ಲಿ ತೊಡಗಿಕೊಳ್ಳುವ 60 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಅವರೆಲ್ಲ ಆಯಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಡಿ.10 ಮತ್ತು 11ರಂದು ಕೂಡ ಬೆಂಗಳೂರಿನ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತಿದೆ ಎಂದರು.
    ರಾಜ್ಯದ ನೆಲ, ಜಲ, ಭಾಷೆ, ಅರಣ್ಯ ಉಳಿಸಲು, ಸ್ವಚ್ಚ, ಪ್ರಾಮಾಣಿಕ ಮತ್ತು ನೈತಿಕ ರಾಜಕಾರಣದಲ್ಲಿ ಆಸಕ್ತಿಯುಳ್ಳವರು, ರಾಜ್ಯದಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಆಕಾಂಕ್ಷೆಯುಳ್ಳವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಸಮಾಜದಲ್ಲಿ ಪುರುಷ ಪ್ರಧಾನ ಸಮಾಜ ಎನ್ನುವ ಹಣೆ ಪಟ್ಟಿ ಕಳಚಿಲ್ಲ. ಅದಕ್ಕೆ ಮುಖ್ಯ ಕಾರಣ ಮಹಿಳೆಯರು ರಾಜಕೀಯಕ್ಕೆ ಬಾರದೇ ಇರುವುದು. ಹೀಗಾಗಿ ಮಹಿಳೆಯರಿಗೆ ನಮ್ಮ ಪಕ್ಷ ಹೆಚ್ಚಿನ ಪ್ರಾತಿನಿಧ್ಯ ಒದಗಿಸುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಸ್ಪರ್ಧೆಗೆ ಮುಂದೆ ಬಂದಲ್ಲಿ ಪಕ್ಷದ ಶಕ್ತ್ಯಾನುಸಾರ ಆ ಮಹಿಳಾ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನ ಪಕ್ಷವೇ ಭರಿಸಲಿದೆ. ದಿಟ್ಟ ಮಹಿಳೆಯರು ರಾಜಕೀಯಕ್ಕೆ ಬಂದು, ಮಹಿಳಾ ರಾಜಕೀಯದ ಕೊರತೆಯನ್ನ ನೀಗಿಸಬೇಕು ಎಂದು ತಿಳಿಸಿದ್ದಾರೆ.


    ತಿಂಗಳಿಗೆ 16 ಲಕ್ಷ ದೇಣಿಗೆ:
    ದೇಶದಲ್ಲಿ ಭ್ರಷ್ಟಾಚಾರ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸವಾಗುತ್ತಿಲ್ಲ. ಪೊಲೀಸರ ದೌರ್ಜನ್ಯ ಎಲ್ಲೆ ಮೀರಿದೆ. ಜನರಿಗೆ ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎನ್ನುವುದು ಕೂಡ ತಿಳಿಯುತ್ತಿಲ್ಲ. ನ್ಯಾಯ ಕೊಡಬೇಕಾದ ಪೊಲೀಸರೇ ಅಕ್ರಮ, ಅನ್ಯಾಯದಲ್ಲಿ ಮುಳುಗಿದ್ದಾರೆ. ಪ್ರಾಮಾಣಿಕತೆ, ನೈತಿಕ ಮೌಲ್ಯಗಳ ರಾಜಕಾರಣ ಇಲ್ಲದಿರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದು ರಘು ಜಾಣಗೆರೆ ಹೇಳಿದರು.
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಲ್ಲಿ ಉದಯವಾದ ನಂತರ ಅಧ್ಯಕ್ಷ ರವಿಕೃಷ್ಣ ರೆಡ್ಡಿಯವರ ನೇತೃತ್ವದ ತಂಡ 150ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಲಂಚ ಮುಕ್ತ ಅಭಿಯಾನ ನಡೆಸಿದೆ. ಇದರ ಫಲವಾಗಿ ಜನರಿಂದು ಎಲ್ಲರನ್ನೂ ಪ್ರಶ್ನೆ ಮಾಡುವ ಹಂತಕ್ಕೆ ಧೈರ್ಯ ಮಾಡುತ್ತಿದ್ದು, ಪಕ್ಷದ ಮೇಲೆ ವಿಶ್ವಾಸವಿಡುತ್ತಿದ್ದಾರೆ. ಪಕ್ಷ ಬೆಳೆಯಬೇಕಾದರೆ ಜನರ ದೇಣಿಗೆ ಬೇಕು, ಅವರ ಹಣದಿಂದಲೇ ರಾಜಕೀಯ ಮಾಡುತ್ತಿದ್ದೇವೆ. ತಿಂಗಳಿಗೆ 16 ಲಕ್ಷದಂತೆ ದೇಣಿಗೆ ಬರುತ್ತಿದ್ದು, ಕೋಟಿಗಟ್ಟಲೆ ಹಣ ಹರಿದು ಬರುತ್ತಿದೆ. ಇದರ ಖರ್ಚು- ವೆಚ್ಚವನ್ನ ಜನರ ಮುಂದೆ ಇಡುತ್ತಿದ್ದೇವೆ. ಆ ಕಾರಣಕ್ಕಾಗಿ ನಮ್ಮ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದರು.
    ***

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top