Slide
Slide
Slide
previous arrow
next arrow

ಬುಡಕಟ್ಟು ಸಮುದಾಯಗಳಲ್ಲಿ ಆತ್ಮವಿಶ್ವಾಸ ತುಂಬಲು ಗ್ರಾಮ ವಾಸ್ತವ್ಯ: ಶ್ರೀರಾಮುಲು

300x250 AD

ಯಲ್ಲಾಪುರ: ಬುಡಕಟ್ಟು ಸಮುದಾಯದವರು ಸರ್ಕಾರವನ್ನು ಹುಡುಕಿಕೊಂಡು ಸರಕಾರದ ಬಾಗಿಲಿಗೆ ಬರಬಾರದು. ಸರ್ಕಾರ ಆ ಸಮುದಾಯಗಳ ಮನೆಗೆ ಹೋಗಬೇಕು. ಸರ್ಕಾರ ಕೊಟ್ಟಂತಹ ಎಲ್ಲ ಯೋಜನೆಗಳು ಮುಟ್ಟಿಸಬೇಕು. ಸಿದ್ದಿ ಸಮುದಾಯದ ಜೊತೆಗೆ ಸರ್ಕಾರ ಇದೆ ಎನ್ನುವ ಆತ್ಮವಿಶ್ವಾಸ ಅವರಲ್ಲಿ ತುಂಬುವ ಉದ್ದೇಶದಿಂದ ಈ ಗ್ರಾಮಕ್ಕೆ ಬಂದು ಗ್ರಾಮ ವಾಸ್ತವ್ಯ ಮಾಡಿರುವುದಾಗಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ಪಂಚಾಯತ ವ್ಯಾಪ್ತಿಯ ಮಾಗೋಡ ಗ್ರಾಮದ ಕೆರೆಕುಂಬ್ರಿ ಗ್ರಾಮದಲ್ಲಿ ಗಣಪತಿ ರಾಮ ಸಿದ್ದಿ ಮನೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಇಲಾಖೆಯ ಡೈರೆಕ್ಟರ್ ಕಾಂತರಾಜ್, ನಿಗಮದ ನಿರ್ದೇಶಕರಾದಂತಹ ಕವಿತಾ ಅವರು ಗಣಪತಿ ರಾಮ ಸಿದ್ದಿಯವರ ಮನೆಯಲ್ಲಿ ವಾಸ್ತವ್ಯ ಮಾಡುವುದರ ಮೂಲಕ ಪರಿಶಿಷ್ಟ ವರ್ಗಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದೇವೆ. ತಳಮಟ್ಟದ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶವು ಇದರಲ್ಲಿ ಅಡಗಿದೆ ಎಂದರು.
ಮುಖ್ಯಮoತ್ರಿ ಬಸವರಾಜ ಬೊಮ್ಮಾಯಿಯವರು ಮೀಸಲಾತಿಯನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಸಿದ್ದಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು, ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಶಿಕ್ಷಣದಿಂದ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ ಎನ್ನುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಸಿದ್ದಿ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಯಲ್ಲಾಪುರ ತಾಲೂಕಿನಲ್ಲಿ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು. ಈ ಸಮುದಾಯದ ಮಕ್ಕಳು ಬೇರೆಲ್ಲ ಸಮುದಾಯದ ಜೊತೆಗೆ ಬೆರೆತು ಮುಖ್ಯ ವಾಹಿನಿಯಲ್ಲಿ ಬರಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಿದ್ದಿ ಸಮುದಾಯದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವಂತಹ ಕೆಲಸವನ್ನು ಮಾಡಲಾಗುವುದು ಎಂದರು.
ಕೊರೋನಾ ಸಂದರ್ಭದಲ್ಲಿ ಸಾರಿಗೆಯ ಎಲ್ಲ ನಿಗಮಗಳು ಹಾನಿಯಲ್ಲಿ ಸಾಗಿದ್ದವು. ಆದರೆ ಈಗ ಸಮಯ ಬದಲಾಗಿದೆ. ಎಲ್ಲ ವಿಭಾಗಗಳು ಲಾಭದಲ್ಲಿ ನಡೆಯುತ್ತಿದೆ. ಸಾರಿಗೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾರಿಗೆ ನಿಗಮಗಳನ್ನು ಲಾಭದ ದೃಷ್ಟಿಕೋನದಿಂದ ಹೊರಗಿಟ್ಟು ಸೇವೆಯ ದೃಷ್ಟಿಕೋನದಿಂದ ನೋಡಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಳ್ಳಿಗಳಿಂದ ನಗರಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡಿಕೊಂಡರೆ ಅದು ಸರ್ಕಾರಕ್ಕೂ ಲಾಭವಾಗಿದೆ. ಮುಂದಿನ ದಿನಗಳಲ್ಲಿ 30 ಸಾವಿರ ಹಳೆ ಬಸ್ಸುಗಳನ್ನು ಬದಲಾಯಿಸಿ, ಹೊಸ ಬಸ್ಸುಗಳನ್ನು ಬರಲಿವೆ. 2,000 ಚಾಲಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಾ ಚಾಲಕರು ನೇಮಕವಾದ ನಂತರ ಕುಗ್ರಾಮಗಳಿಗೂ ಬಸ್‌ಗಳನ್ನು ಓಡಿಸುವ ವ್ಯವಸ್ಥೆ ಆಗಲಿದೆ ಎಂದು ಸಾರಿಗೆ ನಿಗಮದ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಓದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚಿಸಿ ನಿರ್ಣಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಅನೇಕ ಸ್ಥರದ ಅಧಿಕಾರಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top