Slide
Slide
Slide
previous arrow
next arrow

ಶಿರಸಿಯಲ್ಲಿ ಲಯನ್ಸ್ ಕ್ಲಬ್‌ನಿಂದ ಉಚಿತ ಎಮಿಶನ್ ಟೆಸ್ಟ್

300x250 AD

ಶಿರಸಿ: ಶಿರಸಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯಕ್ರಮದ ಅಂಗವಾಗಿ ನಗರದ ಅಟೋರಿಕ್ಷಾಗಳಿಗೆ ಉಚಿತವಾಗಿ ಎಮಿಶನ್ ಟೆಸ್ಟನ್ನು (ಮಾಲಿನ್ಯ ಪರೀಕ್ಷೆ) ಬನವಾಸಿ ರಸ್ತೆಯಲ್ಲಿರುವ ಖುಷಿ ಎಮಿಶನ್ ಕ್ಯಾಂಪ್‌ನಲ್ಲಿ ಡಿ. ೧೦,ಶನಿವಾರದಂದು ನಡೆಸಿಕೊಟ್ಟಿತು.

ನಿವೃತ್ತ ಆರ್.ಟಿ.ಓ. ಸಿ.ಡಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಮಾಲಿನ್ಯ ತಡೆ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿದ್ದಾಗಿದೆ. ರಿಕ್ಷಾ ಮಾಲಕರು ಮತ್ತು ಚಾಲಕರಿಂದ ಉತ್ತಮ ಸ್ಪಂದನೆ ದೊರಕಿದ್ದು ಸಂತೋಷವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ್ ಮಾತನಾಡಿ, ಉತ್ತಮ ಪರಿಸರದಲ್ಲಿ ಬೆಳೆದ ನಾವು ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಿಟ್ಟುಹೋಗುವ ಹೊಣೆಗಾರಿಕೆ ಇದೆ. ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಈಗಾಗಲೇ ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳಿಂದ ಜನಜೀವನಕ್ಕೆ ಬವಣೆಯಾಗುತ್ತಿದೆ. ನಾವು ಇದನ್ನರಿತು ನಮ್ಮ ಪರಿಸರವನ್ನು ಮಾಲಿನ್ಯ ರಹಿತವಾಗಿ ಉಳಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರೀಜನ್ ಚೇರ್‌ಪರಸನ್ ಜ್ಯೋತಿ ಭಟ್, ಕ್ಲಬ್ ಕಾರ್ಯದರ್ಶಿ ರಮಾ ಪಟವರ್ಧನ್ ಉಪಸ್ಥಿತರಿದ್ದರು. ಲಯನ್ ಗುರುರಾಜ ಹೊನ್ನಾವರ ಅವರು ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಒಟ್ಟೂ ನೂರು ಆಟೋ ರಿಕ್ಷಾಗಳು ಲಯನ್ಸ್ ಕ್ಲಬ್ ಆಯೋಜಿಸಿದ ಉಚಿತ ಎಮಿಶನ್ ಟೆಸ್ಟ್ನ ಪ್ರಯೋಜನವನ್ನು ಆಟೋ ಚಾಲಕರು ಬರುವ 15 ದಿನಗಳಲ್ಲಿ ಪಡೆಯಬಹುದು ಎಂದು ಗುರುರಾಜ ಹೊನ್ನಾವರ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಲಯನ್ಸ್ ಬಂಧುಗಳಾದ ಡಾ|| ಎಮ್. ಜಿ. ಹೆಗಡೆ, ಉದಯಸ್ವಾದಿ, ಡಾ|| ಜಿ.ಎ. ಹೆಗಡೆ ಸೋಂದಾ, ಲೋಕೇಶ ಹೆಗಡೆ, ವಿ.ಎನ್. ಹೆಗಡೆ, ಶರಾವತಿ ಭಟ್, ನಾಗರಾಜ ಹೆಗಡೆ, ಅಶ್ವಥ ಹೆಗಡೆ, ಶ್ರೀಕಾಂತ ಹೆಗಡೆ ಮತ್ತು ಲಿಯೋ ಅಪೂರ್ವಾ ಹೊನ್ನಾವರ ಉಪಸ್ಥಿತರಿದ್ದು ಸಹಕರಿಸಿದರು. ಅಟೋ ಚಾಲಕರು, ಮಾಲಕರು ಉಪಸ್ಥಿತರಿದ್ದು ಸೇವಾ ಯೋಜನೆಯ ಪ್ರಯೋಜನ ಪಡೆದರು.

300x250 AD
Share This
300x250 AD
300x250 AD
300x250 AD
Back to top