• Slide
  Slide
  Slide
  previous arrow
  next arrow
 • ನಿನಾಸಂನವರು ಕಲಾವಿದರನ್ನು ಬೆಳೆಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ: ಶಾಂತಾರಾಮ ಸಿದ್ದಿ

  300x250 AD

  ಯಲ್ಲಾಪುರ: ನಿನಾಸಂದವರು ಸಂಪಾದನೆಗಿoತಲು ಕಲಾವಿದರನ್ನು ಬೆಳೆಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಕಲಾವಿದರ ಜೀವನಕ್ಕೆ ಅನುಕೂಲವಾಗುತ್ತಿದೆ. ನಾಟಕ ಮನುಷ್ಯನಿಗೆ ಸಂಸ್ಕಾರ ನೀಡುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
  ಅವರು ಗಾಂಧಿ ಕುಟಿರದಲ್ಲಿ ಅಡಿಕೆ ವ್ಯವಹಾರಸ್ಥರ ಸಂಘದ ನೇತ್ರತ್ವದಲ್ಲಿ `ನಿನಾಸಂ ತಿರುಗಾಟ’ ತಂಡದಿoದ 2 ದಿನಗಳ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ನಿನಾಸಂ ನಾಟಕದಿಂದ ಮಂಚಿಕೇರಿಯಲ್ಲಿ ಬುಡಕಟ್ಟು ಜನಾಂಗದ ಪ್ರತಿಭಾವಂತರಾದ ಗಿರಿಜಾ, ಗೀತಾ, ಮಂಜುನಾಥ ಇವರೆಲ್ಲ ಉತ್ತಮ ಕಲಾವಿದರಾಗಿ ರೂಪುಗೊಂಡಿದ್ದಾರೆ. ಕಲಾ ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
  ಪ0ಚಾಯತ್‌ರಾಜ್ ವಿಕೇಂದ್ರೀಕರಣ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಾಂಸ್ಕೃತಿಕ ಸಂಘಟನೆ ಬಹಳ ಕಷ್ಟ. ಯಲ್ಲಾಪುರದಂತ ಸಂಪದ್ಭಭರಿತ ಸಾಂಸ್ಕೃತಿಕ ನೆಲಕ್ಕೆ ಸುಸಜ್ಜಿತ ರಂಗಮoದಿರ ಈ ವರೆಗೂ ಲಭ್ಯವಾಗಿಲ್ಲ. ಆದರೂ ಕುಂದರಗಿ ಎನ್.ಎಸ್.ಹೆಗಡೆಯವರ ಅಂದಿನ ಸಂದರ್ಭದಲ್ಲಿ ಗಾಂಧಿಕುಟೀರ ನಿರ್ಮಿಸಿದ್ದರು. ಈ ದೃಷ್ಟಿಯಿಂದ ಸಣ್ಣ ಪುಟ್ಟ ಕಾರ್ಯಕ್ರಮಕ್ಕೆ ಮಧ್ಯವರ್ತಿ ಸ್ಥಳವಾಗಿದೆ. ಇಲ್ಲಿ ಉತ್ತಮ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಜನರಿದ್ದಾರೆ ಎಂದರು.
  ಸoಘಟಕ ಲೋಕನಾಥ ಗಾಂವ್ಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಭಟ್ಟ ವಂದಿಸಿದರು. ಪ್ರಮುಖರಾದ ಉಮೇಶ ಭಟ್ಟ, ಎಂ.ಆರ್.ಹೆಗಡೆ, ರವಿ ಹೆಗಡೆ, ಡಿ.ಜಿ.ಹೆಗಡೆ, ನರಸಿಂಹ ಭಟ್ಟ, ಡಿ.ಎನ್.ಗಾಂವ್ಕರ್, ಜಗದೀಶ ಕಮ್ಮಾರ, ಪ್ರಕಾಶ ನಾಯಕ, ಮತ್ತಿತರರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top