ಕುಮಟಾ: ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ತಮ್ಮ ಹಕ್ಕು,ಕರ್ತವ್ಯಗಳ ಅರಿವು ಮೂಡಿಸಲು ಮಿರ್ಜಾನ ಕ್ಲಸ್ಟರ್ ಮಟ್ಟದ 15 ಶಾಲೆಗಳ ವಿದ್ಯಾರ್ಥಿಗಳಿಗೆ ಮಿರ್ಜಾನ ಗ್ರಾ.ಪಂ. ಕಚೇರಿಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲಾಯಿತು.
ಮಕ್ಕಳ ಗ್ರಾಮ ಸಭೆ ನಿಮಿತ್ತ ಮಿರ್ಜಾನ ಗ್ರಾ.ಪಂ. ಗೆ ಶಿಕ್ಷಕರ ಜೊತೆ ತೆರಳಿದ ವಿದ್ಯಾರ್ಥಿಗಳು ವೇದಿಕೆಯಲ್ಲಿ ಉದ್ಘಾಟನೆ, ಅಧ್ಯಕ್ಷತೆ, ಅತಿಥಿ, ಸ್ವಾಗತ ನಿರೂಪಣೆ ವಂದನಾರ್ಪಣೆ ಎಲ್ಲವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದರು.
ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯದ ಮಿರ್ಜಾನ ಕೋಡ್ಕಣಿಯ ವಿದ್ಯಾಥಿ ಸುನಾದ ಮಹಾಲೆ, ಉದ್ಘಾಟಕರಾಗಿ ಉರ್ದು ಪ್ರೌಢಶಾಲಾ ವಿದ್ಯಾಥಿ ತಮೀನ ಇಸಾಕ ಶೇಖ, ಅತಿಥಿಗಳಾಗಿ ಕುಡಗುಂಡಿ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ಸೃಜನ ಸುರೇಶ ನಾಯಕ, ಅರುಣ ಮರಾಠಿ ಹೊನ್ನಕೆರೆ, ಗೌತಮಿ ಅಂಬಿಗ ತಾರಿಬಾಗಿಲ, ತನುಶ್ರಿ ಖೈರೆ, ವಿನಯ ಎಸ್ ಶೆಟ್ಟಿ ಎತ್ತಿನಬೈಲ್ ಪಿ.ಮಹೇಶ ಪಟಗಾರ ಅತಿಥಿಯಾಗಿ ವೇದಿಕೆ ಅಲಂಕರಿಸಿದ್ದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಆಹಾರ ದಾಸ್ತಾನಿಗೆ ಸ್ಟೋರ್ ರೂಮ, ಅಟದ ಮೈದಾನ, ರೆಕ್ಸ ದುರಸ್ತಿ, ಮೇಲ್ಚಾವಣಿ ರಿಪೇರಿ, ಕಸದ ತೊಟ್ಟಿ, ಕಂಪೌಂಡ್, ನೀರು ಮುಂತಾದ ತಮ್ಮ ತಮ್ಮ ಶಾಲೆಯ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ಸಭೆಯ ಮುಂದೆ ನಿಭಾಯಿಸಿದರು.
ಪಿಡಿಓ ಅಮೃತಾ ಭಟ್ಟ ಮಕ್ಕಳ ಹಕ್ಕು ಕರ್ತವ್ಯದ ಕುರಿತು ಸವಿವರವಾದ ಮಾಹಿತಿ ನೀಡಿದರು. ಸಿಆರ್‌ಪಿ ಭಾರತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಸೀತಾ ಸತೀಶ ಭಟ್ಟ, ಸದಸ್ಯರದ ಗಣೇಶ ಅಂಬಿಗ, ಪರ್ಸು ಪರ್ನಾಂಡೀಸ್, ವಿವಿದ ಶಾಲಾ ಶಿಕ್ಷಕರಾದ ವಿದ್ಯಾ ಎನ್ ಗಾಂವಕರ, ಸೂಲಪ್ಪ ಪಟಗಾರ, ರೋಹಿಣಿ ಶೇಟ, ಸುರೇಶ ಪಟಗಾರ, ಮಧುಕರ ನಾಯಕ, ಅನಿಲ ಭಂಡಾರಿ, ಚಂದ್ರಕಲಾ ಭಂಡಾರಿ, ಕುಮುದ ನಯ್ಕ, ಅನಂತ ಎನ್ ಹೆಗೆಡ, ಬಾಲಚಂದ್ರ ಗಾಂವಕರ, ಗೀತಾ ತೇಲಂಗ, ಭಾರತಿ ನಾಯ್ಕ, ಅಯುಮ ದಮ್ಕಾರ ಮುಂತಾದವರು ಹಾಜರಿದ್ದರು. ವಿದ್ಯಾರ್ಥಿ ಲಾವಣ್ಯ ಕೇಶವ ಪಟಗಾರ ಸ್ವಾಗತಿಸಿದರು. ಮಂಜುನಾಥ ಜಟ್ಟಿ ಪಟಗಾರ ನಿರೂಪಿಸಿದರು. ಲಕೀಬ ಇದ್ರಿಸ್ ಮುಜಾವರ ವಂದಿಸಿದರು. ಸಭೆಯ ನಂತರ ವಿದ್ಯಾರ್ಥಿಗಳಿಗೆ ಲಘು ಉಪಹಾರ ನೀಡಲಾಯಿತು.