ಕಾರವಾರ: ಸಂವಿಧಾನ ಶಿಲ್ಪಿ, ಆಧುನಿಕ ಭಾರತದ ನಿರ್ಮಾತೃ ಬಾಬಾಸಾಹೇಬ ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಅವರ 66ನೇಯ ಮಹಾಪರಿನಿರ್ವಾಣ ದಿನದ ನೆನಪಿನ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.
ಶಿಬಿರದಲ್ಲಿ 32 ದಾನಿಗಳು ಭಾಗವಹಿಸಿದರು. ಹದಿನೆಂಟು ವರುಷದ ಯುವ ವಿದ್ಯಾರ್ಥಿನಿ ಆದಿಶ್ರೀ ಉತ್ತರಕರ ರಕ್ತದಾನ ನೀಡಿದ್ದು, ಎಲ್ಲರ ಗಮನ ಸೆಳೆಯಿತು. ಜಿಲ್ಲಾ ಆಸ್ಪತ್ರೆ ಹಾಗೂ ಕೈಗಾ ಅಣುಶಕ್ತಿ ಕೇಂದ್ರದ ಆಸ್ಪತ್ರೆ ಸಹಯೋಗದಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಶಿಬಿರವನ್ನು ಆಯೋಜಿಸಿತ್ತು.
ಮುಖ್ಯ ಅತಿಥಿಯಾಗಿ ಕೈಗಾದ ಅಣುವಿದ್ಯುತ್ ಕೇಂದ್ರದ ಸ್ಥಾನೀಯ ನಿರ್ದೇಶಕ ಪ್ರಮೋದ ಜಿ.ರಾಯಚೂರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಎಲ್ಲಾ ದಾನಗಲ್ಲಿ ಶ್ರೇಷ್ಠದಾನ. ಇದು ಬೇರೆಯವರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುವುದು ಎಂದು ಹೇಳಿದರು.