• Slide
    Slide
    Slide
    previous arrow
    next arrow
  • ಯಡಳ್ಳಿಯಲ್ಲಿ ಮೇಳೈಸಿದ ‘ನಾಟ್ಯ ಸಂಭ್ರಮ’

    300x250 AD

    ಶಿರಸಿ: ನಾಟ್ಯಾಂಜಲಿ‌ ನೃತ್ಯ ಕಲಾಕೇಂದ್ರ ಶಿರಸಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಆವಾರದಲ್ಲಿ ಏರ್ಪಡಿಸಿದ್ದ ‘ನಾಟ್ಯ ಸಂಭ್ರಮ’ ಕಾರ್ಯಕ್ರಮ ಜನಮನ ಗೆದ್ದು ರೂಪಕಾಭಿನಯಗಳು ಸಾಂಸ್ಕೃತಿಕ ವೈಭವವನ್ನು ಮೇಳೈಸುವಲ್ಲಿ ಯಶಸ್ವಿಯಾಗಿದೆ.
    ನೃತ್ಯ ಗುರುಗಳಾದ ವಿ. ಡಾ. ಸಹನಾ ಪ್ರದೀಪ್ ಭಟ್ಟ ನಿರ್ದೇಶನದಲ್ಲಿ ವಿದುಷಿ ಸಂಪದಾ ಮರಾಠೆ ಮತ್ತು ಅವರ ತಂಡ ವಿವಿಧ ನೃತ್ಯ ಅಭಿನಯದ ಮೂಲಕ ಮಿರ್ಜಾನ್ ರಾಣಿಯ ಕಥಾನಕವನ್ನು ವಿಶಿಷ್ಟವಾಗಿ ರೂಪಿಸಿಕೊಂಡು, ರಾಣಿಯ ಧೈರ್ಯ, ತ್ಯಾಗ ಹಾಗೂ ಆಡಳಿತದ ಸನ್ನಿವೇಶಗಳನ್ನು ರೂಪಕದ ಮೂಲಕ ಮನೋಜ್ಞವಾಗಿ ಅಭಿನಯಿಸಿ ಸಭೆಯ ಕರತಾಡನಕ್ಕೆ ಪಾತ್ರರಾದರು. ಪ್ರತಿಯೊಂದು ಹಂತದಲ್ಲೂ ವೈವಿಧ್ಯಮಯ ಅಭಿನಯ ನೀಡಿದ ನೃತ್ಯಪಟುಗಳು ಕಲಾಭಿಮಾನಿಗಳ ಹರ್ಷದ ಮಾತಿಗೆ ಸಾಕ್ಷಿಯಾದರು.

    ನಾಟ್ಯ ಸಂಭ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಾ.ಶಿ.ಪ್ರ. ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಹೆಗಡೆ ಮಶೀಗದ್ದೆ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಅವರದ್ದೇ ಆದ ಪ್ರತಿಭೆ ಇರುತ್ತದೆ. ಶಾಲಾ-ಕಾಲೇಜು ಹಂತದಲ್ಲಿ ಪಠ್ಯಕ್ರಮದೊಂದಿಗೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತನ್ಮೂಲಕ ಜೀವನದಲ್ಲಿ ಯಶಸ್ಸು ಗಳಿಸಿರಿ ಎಂದು ಕಿವಿಮಾತನ್ನು ಹೇಳಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ರಮ ಅಭ್ಯಾಸದೊಂದಿಗೆ ಶಾಸ್ತ್ರೀಯ ಬದ್ಧವಾದ ನಾಟ್ಯ, ಸಂಗೀತದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವೆಲ್ಲವೂ ಮನಸ್ಸಿನ ಏಕಾಗ್ರತೆಗೆ ಸಹಕಾರಿಯಾಗುತ್ತಿದ್ದು, ಅದರಿಂದ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಲು, ಯಶಸ್ಸು ಕಾಣಲು ಸಹಾಯವಾಗುತ್ತದೆ. ಜೊತೆ ಜೊತೆಗೆ ಶಾಲಾ ಆವಾರದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ವಿದ್ಯೋದಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಆರ್. ಟಿ. ಭಟ್ ಮಾತನಾಡಿ ಸಂಸ್ಥೆಯ ಇಂತಹ ಕಾರ್ಯಕ್ರಮಗಳು ಒಳ್ಳೆಯ ಉದ್ದೇಶವನ್ನು ಹೊಂದಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.

    300x250 AD

    ಕಾಲೇಜಿನ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಗಿರಿಧರ್ ಕಬ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು. ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಮುಖ್ಯಸ್ಥ ಪ್ರದೀಪ್ ಭಟ್ ಅತಿಥಿಗಳನ್ನು ಗೌರವಿಸಿ,ಕೊನೆಯಲ್ಲಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top