ಯಲ್ಲಾಪುರ: ಇಂದಿನ ಒತ್ತಡದ ಕೆಲಸ ಕಾರ್ಯಗಳ ಮದ್ಯೆ ನಿರಂತರ ಆರೋಗ್ಯ ತಪಾಸಣೆಯ ಅಗತ್ಯತೆ ಇದೆ ಎಂದು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಹೇಳಿದರು.
ತಾಲ್ಲೂಕು ಪಂಚಾಯಿತಿ ಆವರಣದ ಗಾಂಧಿ ಕುಟೀರದಲ್ಲಿ ಯಲ್ಲಾಪುರ ಮತ್ತು ಮುಂಡಗೋಡಿನ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಇಓ ಜಗದೀಶ ಕಮ್ಮಾರ, ಲೆಕ್ಕಾಧಿಕಾರಿ ಮೋಹನ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ, ತಾಲ್ಲೂಕು ಆರೊಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ನೇತ್ರ ತಜ್ಞೆ ಡಾ.ಸೌಮ್ಯ ಕೆ.ವಿ. ವೇದಿಕೆಯಲ್ಲಿದ್ದರು.
ಶಿಬಿರದಲ್ಲಿ 107 ಸಿಬ್ಬಂದಿಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದ್ದು, ದಂತ ವಿಭಾಗದಲ್ಲಿ 52, ಕಣ್ಣು ತಪಾಸಣೆ 101, ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ 20, ಇಸಿಜಿ 120 ಸಿಬ್ಬಂದಿಗೆ ಮಾಡಲಾಗಿದ್ದು, 130 ಸಿಬ್ಬಂದಿಗೆ ಅಬಾ ಕಾರ್ಡ ಮಾಡಲಾಗಿದೆ. 29 ಜನರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದು, 17 ಸಿಬ್ಬಂದಿ ರಕ್ತದಾನ ಮಾಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಪ್ರಗತಿ ಸಹಾಯಕ ಗಣಪತಿ ಭಾಗ್ವತ್ ಸ್ವಾಗತಿಸಿ ನಿರೂಪಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ವಂದಿಸಿದರು.