• Slide
    Slide
    Slide
    previous arrow
    next arrow
  • ಪರಿಸರ ಪ್ರೇಮಿ, ಪತ್ರಕರ್ತ ಬಿ.ಜಿ.ಹೆಗಡೆ ಗೇರಾಳ ನಿಧನ

    300x250 AD

    ಯಲ್ಲಾಪುರ: ಸರಳ-ಸಜ್ಜನ ಹಾಗೂ ಸಹೃದಯಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡ ಭಾಸ್ಕರ ಹೆಗಡೆ (68) (ಬಿ.ಜಿ.ಹೆಗಡೆ ಗೇರಾಳ) ಬುಧವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.
    ಅವರು ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಸದಸ್ಯರಾಗಿ, ಶ್ರೀಮಠದ ಸಪ್ತಪದಿ ಸಂಸ್ಥೆಯ ಅಧ್ಯಕ್ಷರಾಗಿ, ಶಿರಸಿ ಟಿ.ಎಸ್.ಎಸ್.ಸಂಸ್ಥೆಯ ಸ್ಥಳಿಯ ನಿರ್ದೇಶಕರಾಗಿ, ಯಲ್ಲಾಪುರದ ಮಲೆನಾಡು ಕೃಷಿ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ, ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರಾಗಿ, ಆನಗೋಡ ಮತ್ತು ಕಣ್ಣೀಗೇರಿಯ ಹಾಲು ಉತ್ಪಾದಕ ಸಹಕಾರಿ ಸಂಘದ ಸಂಸ್ಥಾಪಕರಾಗಿ, ಅಡಿಕೆ ವ್ಯವಹಾರಸ್ಥರಾಗಿ, ಉಮ್ಮಚಗಿಯ ಶ್ರೀಮಾತಾ ಸೌಹಾರ್ದ ಸಹಕಾರಿಯ ಯಲ್ಲಾಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
    ಅಲ್ಲದೇ ಅನೇಕ ವರ್ಷಗಳ ಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ಬಿ.ಜಿ.ಹೆಗಡೆ ಪರಿಸರ ಪ್ರೇಮಿಯಾಗಿ ಜನಪರ ಕಾಳಜಿಹೊಂದಿದ ಅಪರೂಪದ ವ್ಯಕ್ತಿಯಾಗಿದ್ದರು. ಅತ್ಯುತ್ತಮ ಕೃಷಿಕರಾಗಿದ್ದ ಇವರು, ನೂರಾರು ರೈತರಿಗೆ ಅಡಿಕೆ ತೋಟದ ನಿರ್ಮಾಣದಲ್ಲಿ ಮಾರ್ಗದರ್ಶಕರಾಗಿದ್ದರು.
    ಸಂತಾಪ: ಬಿ.ಜಿ.ಹೆಗಡೆಯವರ ಆಕಸ್ಮಿಕ ನಿಧನಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನಿನ ತಾಲೂಕಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀಮಾತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ, ಎಂ.ರವೀಂದ್ರ, ಪ.ಪಂ ಶೇಖಿ ಸದಸ್ಯೆ ಹಾಗೂ ವಕೀಲರಾದ ಬೀಬಿ ಅಮೀನಾ ಶೇಖ ಮುಂತಾದವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top