ಹೊನ್ನಾವರ: ತಾಲೂಕಿನ ಒಕ್ಕಲಿಗ ಯಕ್ಷಗಾನ ಬಳಗದ ವತಿಯಿಂದ ಕೆಳಗಿನೂರಿನ ಒಕ್ಕಲಿಗ ಸಭಾಭವನದಲ್ಲಿ ಡಿ.10ರಂದು 4ನೇ ವರ್ಷದ ಯಕ್ಷೋತ್ಸವ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕ ಅಧ್ಯಕ್ಷ ಹಾಗೂ ಶಿಕ್ಷಕ ಎಸ್.ಎಚ್.ಗೌಡ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುಟ್ಟಿಹಾಕಿದ ಯಕ್ಷಗಾನ ಬಳಗವು 4 ವರ್ಷದಿಂದ ಯಕ್ಷೋತ್ಸವ ಆಯೋಜಿಸುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಒಕ್ಕಲಿಗ ಕಲಾಶ್ರೀ ಪ್ರಶಸ್ತಿ ಪ್ರದಾನ, ಕಲಾ ಪೋಷಕರಿಗೆ ಸನ್ಮಾನ, ಬಾಲಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಾ ಬಂದಿದೆ. ಈ ಬಾರಿಯು ಡಿ.10ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕುಮಟಾದ ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ನಿಶ್ಚಲನಂದನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕ ಸುನೀಲ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿಲಿದ್ದು, ಮಾಜಿ ಶಾಸಕ ಮಂಕಾಳ ವೈದ್ಯ ಪ್ರಶಸ್ತ್ರಿ ಪ್ರಧಾನ ಮಾಡುವವರು.
ಪ್ರಸಕ್ತ ಸಾಲಿನ ಒಕ್ಕಲಿಗ ಕಲಾಶ್ರೀ ಪ್ರಶಸ್ತ್ರಿಯನ್ನು ಯಕ್ಷಗಾನ ಕಲಾವಿದರಾದ ಮಹಾದೇವ ಪಟಗಾರ ಇವರಿಗೆ ಪ್ರಧಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ನಿರ್ದೆಶಕ ಧರ್ಮೇಶ ಸಿರಿಬೈಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಜನಪದ ಹಾಡುಗಾರ್ತಿ ಕೇಶಿ ಗೌಡ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಗೌಡ, ಮಂಜು ಗೌಡ, ಡಾ.ಆಶಿಕ್ ಹೆಗ್ಡೆ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಒಕ್ಕಲಿಗ ಸಮಾಜದ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ಶಿವಾನಂದ ಗೌಡ, ಯಕ್ಷಗಾನ ಕಲಾವಿದ ಸುಬ್ರಾಯ ಭಟ್, ಜಿನ್ನೋಡು ಕ್ಷೇತ್ರದ ಧರ್ಮದರ್ಶಿ ಶ್ರೀನಾಥ ಪೂಜಾರಿ, ಕೆ.ಎಸ್.ಗೌಡ, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಶಂಕರ ಗೌಡ, ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ಶಂಕರ ಗೌಡ, ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಒಕ್ಕಲಿಗ ಯಕ್ಷಗಾನ ವೇದಿಕೆಯ ಅಧ್ಯಕ್ಷ ರಾಮ ಗೌಡ, ಸಂಘಟನೆಯ ಗೌರವಾಧ್ಯಕ್ಷ ನಾಗಪ್ಪ ಗೌಡ, ಸಹ ಕಾರ್ಯದರ್ಶಿ ಮಂಜು ಗೌಡ, ಯಕ್ಷಗಾನ ಕಲಾವಿದರಾದ ನಾಗೇಶ ಗೌಡ ಕುಳಿಮನೆ, ಚಂದ್ರಹಾಸ ಗೌಡ, ಚಂದ್ರಶೇಖರ ಗೌಡ ಮತ್ತಿತರರು ಇದ್ದರು.