Slide
Slide
Slide
previous arrow
next arrow

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿ ಚುನಾವಣೆ: ಮತದಾನದ ಫಲಿತಾಂಶ ಪ್ರಕಟ

300x250 AD

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯ ಪ್ರತಿನಿಧಿ ಸ್ಥಾನಕ್ಕಾಗಿ ಕಾರ್ಮಿಕ ಸಂಘಗಳ ನಡುವೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಬಳಿಕ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟಗೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಒಟ್ಟು 7 ಕಾರ್ಮಿಕ ಸಂಘಟನೆಗಳು ಸ್ಪರ್ಧೆಯಲ್ಲಿತ್ತು. 2299 ಮತದಾರರ ಪೈಕಿ 2228 ಮತದಾರರು ಮತ ಚಲಾಯಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ದಾಂಡೇಲಿ ಪೇಪರ್ ಮಿಲ್ ನೌಕರರ ಸಂಘವು 627 ಮತಗಳನ್ನು ಪಡೆದು ಅತ್ಯಧಿಕ ಮತಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. 615 ಮತಗಳನ್ನು ಪಡೆದ ಕಾರ್ಮಿಕ ಸೇನಾ ಎರಡನೇ ಸ್ಥಾನದಲ್ಲಿದೆ. ವರ್ಕರ್ಸ್ ಕ್ರಾಂತಿ ಮೋರ್ಚಾ ಸಂಘವು 336 ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿದೆ. ಇನ್ನೂಳಿದಂತೆ ಪೇಪರ್ ಮಿಲ್ ಮಜ್ದೂರು ಸಂಘವು 296 ಮತಗಳನ್ನು ಪಡೆದರೇ, ದಾಂಡೇಲಿ ಕಾರ್ಮಿಕ ಸಂಘವು 180 ಮತಗಳನ್ನು ಪಡೆದುಕೊಂಡಿದೆ. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಯೂನಿಯನ್ ಸಂಘಟನೆಯು 110 ಮತಗಳನ್ನು ಪಡೆದುಕೊಂಡಿದೆ. ಕೊನೆಯದಾಗಿ ದಾಂಡೇಲಿ ಮಜ್ದೂರು ಸಂಘವು 50 ಮತಗಳನ್ನಷ್ಟೆ ಪಡೆಯಲು ಶಕ್ತವಾಗಿದೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 14 ಮತಗಳು ತಿರಸ್ಕೃತಗೊಂಡಿವೆ.
ಜಂಟಿ ಸಂಧಾನ ಸಮಿತಿಗೆ ದಾಂಡೇಲಿ ಪೇಪರ್ ಮಿಲ್ ನೌಕರರ ಸಂಘ, ಕಾರ್ಮಿಕ ಸೇನಾ ಮತ್ತು ವರ್ಕರ್ಸ್ ಕ್ರಾಂತಿ ಮೋರ್ಚಾ ಸಂಘವು ಆಯ್ಕೆಯಾಗಿದೆ. ಈ ಬಾರಿ ಜಂಟಿ ಸಂಧಾನ ಸಮಿತಿಗೆ ಮೂರು ಸ್ಥಾನಗಳನ್ನಷ್ಟೆ ಪಡೆಯಲು ಕಾರ್ಮಿಕ ಸಂಘಟನೆಗಳು ಶಕ್ತವಾಗಿದೆ. ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ್ ಶಿಂಧಿಹಟ್ಟಿಯವರ ನೇತೃತ್ವದಲ್ಲಿ ನಡೆದ ಚುನಾವಣೆಯ ಚುನಾವಣಾಧಿಕಾರಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಅವರು ಕಾರ್ಯನಿರ್ವಹಿಸಿದ್ದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿದರು. ಮತ ಏಣಿಕೆ ಕರ‍್ಯಕ್ಕೆ ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಿಜಾಪುರ್, ಎ.ಜಿ.ಎಂ ವಿಜಯಮಹಾಂತೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಹಾಗೂ ಇನ್ನಿತರ ಅಧಿಕಾರಿಗಳು ಸಹಕರಿಸಿದರು. ಪಿಎಸೈ ಐ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಮತ ಏಣಿಕೆಯ ಸುತ್ತಲು ಪೊಲೀಸ್ ಬಿಗಿ ಬಂದೋಬಸ್ತನ್ನು ಒದಗಿಸಲಾಗಿತ್ತು. ಒಟ್ಟಿನಲ್ಲಿ ಶಾಂತಿಯುತವಾಗಿ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆ ಮುಗಿಯಿತು.

300x250 AD
Share This
300x250 AD
300x250 AD
300x250 AD
Back to top