ಶಿರಸಿ: ಇಲ್ಲಿಯ ಬನವಾಸಿ ರಸ್ತೆಯ ಕೂರ್ಸೆ ಕಾಂಪೌಂಡಿನಲ್ಲಿರುವ ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಶಿರಸಿಯ ಗ್ರೀನ್ ಕೇರ್ (ರಿ). ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆಯ ಕಾರ್ಯದರ್ಶಿ ಎಂ. ಎಂ. ಭಟ್ ಕಾರೇಕೊಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞ ಡಾ|| ಆಶೀಶ್ ವಿ ಜನ್ನು, ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಮತ್ತು ನಿರ್ದೇಶಕರುಗಳಾದ ಉದಯ ನಾಯ್ಕ್ ಮತ್ತು ಪ್ರಶಾಂತ್ ಮೂಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಎಲ್ಲಾ ಮಕ್ಕಳನ್ನು ತಪಾಸಣೆ ಮಾಡಿ ಸೂಕ್ತ ಔಷಧಿಗಳನ್ನು ಕೊಡಲಾಯಿತು. ವಸತಿ ಶಾಲೆಯ ಎಲ್ಲಾ ಸಿಬ್ಬಂದಿಯವರಿಗೂ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಗಳನ್ನು ನಡೆಸಲಾಯಿತು. ವಸತಿ ಶಾಲೆಯ ಎಲ್ಲರಿಗೂ ಹಣ್ಣುಗಳನ್ನು ವಿತರಿಸುವುದರ ಜೊತೆಗೆ ಗ್ರೀನ್ ಕೇರ್ ವತಿಯಿಂದ ವಸತಿ ಶಾಲೆಗೆ ಪ್ರಥಮ ಚಿಕಿತ್ಸೆಯ ಕಿಟ್ ನೀಡಲಾಯಿತು. ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಪಟಗಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.