ಶಿರಸಿ: ಇಲ್ಲಿಯ ಎಪಿಎಂಸಿ ಆವಾರದ ಹುಬ್ಬಳ್ಳಿ ರಸ್ತೆಯ ಗೇಟ್ ಬಳಿ ಬ್ರೇಕ್ ಫೇಲಾದ ಲಾರಿಯೊಂದು ಡಿವೈಡರ್ ಮೇಲೆ ಸಾಗಿದ ಪರಿಣಾಮ ಮೂರು ವಿದ್ಯುತ್ ಕಂಬ ಹಾಗು ಎದುರಿನ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದ್ದು, ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು ಭೇಟಿ ನೀಡಿದರು.
ಎಪಿಎಂಸಿ ಆವಾರದಲ್ಲಿ ಲಾರಿ ಬ್ರೇಕ್ ಫೇಲ್; ಮರಕ್ಕೆ ಡಿಕ್ಕಿ, ತಪ್ಪಿದ ಭಾರೀ ಅನಾಹುತ
