• Slide
  Slide
  Slide
  previous arrow
  next arrow
 • ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯ

  300x250 AD

  ದಾಂಡೇಲಿ: ಸಂದೇಶ್ ನ್ಯೂಸ್ ವತಿಯಿಂದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನಗರದ ಸುಭಾಸನಗರದಲ್ಲಿರುವ ಒಳಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊ0ಡಿತು.
  ದಾಂಡೇಲಿ- ಹಳಿಯಾಳ ಮತ್ತು ಜೊಯಿಡಾ ವಿಧಾನಸಭಾ ಕ್ಷೇತ್ರ ಮಟ್ಟದ ಮುಕ್ತ ಸಿಂಗಲ್ಸ್ ಮತ್ತು ಮುಕ್ತ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಹಾಗೂ ಜಿಲ್ಲಾ ಮಟ್ಟದ ಮುಕ್ತ ಸತಿ- ಪತಿ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಉದ್ಯಮಿ ಪ್ರೇಮಾನಂದ ಗವಸ ಉದ್ಘಾಟಿಸಿ, ಶ್ಲಾಘನೆ ವ್ಯಕ್ತಪಡಿಸಿದರು.
  ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಶಿಕ್ಷಕರಾದ ಸೀತಾರಾಮ ನಾಯ್ಕ, ಗುರು ಮಠಪತಿ, ಡಾ.ವಾಸೀಕ್ ಅಹ್ಮದ್ ಮಳಗಿ, ಕುಮಾರ್ ಕರಗಯ್ಯ, ಸುರೇಶ್ ಕಾಮತ್, ನಿವೇದಿತಾ ಕಾಮತ್, ಪದ್ಮಶ್ರೀ.ಜೈನ್ ಮೊದಲಾದವರು ಉಪಸ್ಥಿತರಿದ್ದರು.
  ಸಮಾರೋಪ ಸಮಾರಂಭ: ಡಿವೈಎಸ್ಪಿ ಗಣೇಶ್ ಕೆ.ಎಲ್. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು. ಪ್ರವಾಸೋದ್ಯಮಿ ಅನಿಲ್ ಪಾಟ್ನೇಕರ್, ದಾಂಡೇಲಪ್ಪಾ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಾ ಪೂಜಾರಿ, ಉದ್ಯಮಿ ನವೀನ್ ಕಾಮತ್, ಡಾ.ಸಲ್ಮಾನ್ ಗೈಮಾ ಮೊದಲಾದವರು ಉಪಸ್ಥಿತರಿದ್ದು, ಪಂದ್ಯಾವಳಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
  ಗುರು ಮಠಪತಿಯವರು ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಪಂದ್ಯಾವಳಿಯ ಸಂಘಟಕ ಸಂದೇಶ್ ಎಸ್.ಜೈನ್ ವಂದಿಸಿದರು. ಪಂದ್ಯಾವಳಿಯ ಯಶಸ್ಸಿಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಸದಸ್ಯರು, ಸಂದೇಶ್ ನ್ಯೂಸ್ ಕಾರ್ಯಾಲಯದ ಪದ್ಮಶ್ರೀ ಜೈನ್, ಯಹೋನಾ ಎಗ್ಗೋನಿ, ರವಿ, ಶಿಲ್ಪಾ, ನವೀನ್ ಧರೇಕರ್ ಮೊದಲಾದವರು ಸಹಕರಿಸಿದರು.


  ಪಂದ್ಯಾವಳಿಯ ವಿಜೇತರು:
  ಎರಡು ದಿನಗಳವರೆಗೆ ನಡೆದ ಪಂದ್ಯಾವಳಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ನಿಹಾಲ್ ಕಾಮತ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡರೆ, ನವನೀತ್ ಕಾಮತ್ ದ್ವಿತೀಯ ಸ್ಥಾನ ಪಡೆದುಕೊಂಡರು. ಡಬಲ್ಸ್ ಪಂದ್ಯಾವಳಿಯಲ್ಲಿ ಡಾ.ಸಲ್ಮಾನ್ ಗೈಮಾ ಮತ್ತು ಸೂಫಿಯಾನ್ ತಂಡ ಪ್ರಥಮ, ನಿಹಾಲ್ ಕಾಮತ್ ಮತ್ತು ಅಭಯ್ ಅವರ ತಂಡ ದ್ವಿತೀಯ ಪಡೆದುಕೊಂಡಿತು. ಜಿಲ್ಲಾ ಮಟ್ಟದ ಸತಿ- ಪತಿ ಡಬಲ್ಸ್ ಪಂದ್ಯಾವಳಿಯಲ್ಲಿ ಡಾ.ಸಲ್ಮಾನ್ ಗೈಮಾ ಮತ್ತು ಡಾ.ಜುಲೇಕಾ ಸಲ್ಮಾನ್ ಅವರ ತಂಡ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡರೆ, ಸಚಿನ್ ಕಾಮತ್ ಮತ್ತು ಸಹನಾ ಕಾಮತ್ ಅವರ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.
  ಸತಿ- ಪತಿ ತಂಡದಲ್ಲಿ ನಗರದ ಹಿರಿಯ ವೈದ್ಯ ಡಾ.ಎಸ್.ಎಲ್.ಕರ್ಕಿ ಮತ್ತು ವಿಜಯಾ ಕರ್ಕಿ ದಂಪತಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಮುಕ್ತ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಕಾಲೇಜು ಹುಡುಗರ ಜೊತೆ ಕುಮಾರ್ ಕರಗಯ್ಯ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರೆ, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ದಿಗಂತ್ ನಾಯಕ ಮತ್ತು ಆಯುಷ್ ಪಾಟೀಲ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಾದ ನವನೀತ್ ಕಾಮತ್ ಮತ್ತು ಯುವರಾಜ್ ಹಾಗೂ ಕಿಶನ್ ಮತ್ತು ಅವೇಶ್ ಅವರ ತಂಡ ಪ್ರಚಂಡರನ್ನು ಹಿಮ್ಮೆಟ್ಟಿಸಿ ಪಂದ್ಯಾವಳಿಗೆ ಮೆರುಗನ್ನು ತಂದುಕೊಟ್ಟು ಕ್ರೀಡಾಪ್ರೇಮಿಗಳಿಗೆ ರಸದೌತಣವನ್ನು ನೀಡಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top